ಸಚಿನ್ ತೆಂಡೂಲ್ಕರ್-ಸಾಹಿಬ್‌ಜಾದಾ ಫರ್ಹಾನ್
ಕರಾಚಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನನ್ನ ಕ್ರಿಕೆಟ್ ಹೀರೋ ಎಂದು ಪಾಕಿಸ್ತಾನ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಹೇಳಿದ್ದಾರೆ.
ಪಾಕಿಸ್ತಾನ್ ಕಪ್ ನಲ್ಲಿ ಬಲೂಚಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಸಾಹಿಬ್‌ಜಾದಾ ಫರ್ಹಾನ್ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ನನ್ನ ಉತ್ತಮ ಪ್ರದರ್ಶನಕ್ಕೆ ಸ್ಪೂರ್ತಿಯಾಗಿದ್ದು ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಎಂದು ಹೇಳಿದ್ದಾರೆ.
ಬಲೂಚಿಸ್ತಾನದ ಆಟಗಾರ ಅಜರ್ ಅಲಿ ಅವರ ನಿರ್ಗಮನದಿಂದ ತಂಡದಲ್ಲಿ ಸ್ಥಾನಪಡೆದ 21 ವರ್ಷದ ಸಾಹಿಬ್‌ಜಾದಾ ಫರ್ಹಾನ್ ಟೂರ್ನಿಯಲ್ಲಿ ಅಧಿಕ ರನ್ ಪೇರಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಐದು ಇನ್ನಿಂಗ್ಸ್ ಗಳನ್ನು ಆಡಿದ್ದ ಫರ್ಹಾನ್ ನಾಲ್ಕು ಅರ್ಧ ಶತಕ ಮತ್ತು ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದು ಶೇ.66.20ರ ಸರಾಸರಿಯಲ್ಲಿ 331 ರನ್ ಪೇರಿಸಿದ್ದರು.