ಕ್ರಿಕೆಟ್

ಟೀಂ ಇಂಡಿಯಾದ ದೀಪ್ತಿ ಶರ್ಮ ವಿಶ್ವದ 2ನೇ ಗರಿಷ್ಠ ರನ್ ಸಾಧನೆ

Vishwanath S
ನವದೆಹಲಿ: ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ದೀಪ್ತಿ ಶರ್ಮಾ ಅವರು 160 ಎಸೆತಗಳಲ್ಲಿ 188 ರನ್ ಗಳನ್ನು ಸಿಡಿಸುವ ಮೂಲಕ ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ 2ನೇ ಗರಿಷ್ಠ ಮೊತ್ತ ದಾಖಲಿಸಿದ ಸಾಧನೆ ಮಾಡಿದ್ದಾರೆ. 
ಆತಿಥೇಯ ಐರ್ಲೆಂಡ್ ವಿರುದ್ಧದ ನಡೆದ ಏಕದಿನ ಪಂದ್ಯದಲ್ಲಿ ದೀಪ್ತಿ ಶರ್ಮ ಈ ಸಾಧನೆ ಮಾಡಿದ್ದು ಇದು ವಿಶ್ವದ 2ನೇ ಗರಿಷ್ಠ ಸಾಧನೆಯಾಗಿದೆ. ಇನ್ನು ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಬಾರಿಸಿರುವ 222 ರನ್ ವಿಶ್ವದಾಖಲೆಯಾಗಿದೆ. 
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕೀಳಿದ ದೀಪ್ತಿ ಶರ್ಮ ಭರ್ಜರಿ 188 ರನ್ ಬಾರಿಸಿ ಔಟಾದರು. ಇದರಲ್ಲಿ 27 ಬೌಂಡರಿ ಮತ್ತು 2 ಸಿಕ್ಸರ್ ಸೇರಿದೆ. ದೀಪ್ತಿ 45ನೇ ಓವರ್ ನಲ್ಲಿ ಔಟಾದರು. ಇಲ್ಲದಿದ್ದರೆ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ವಿಶ್ವದಾಖಲೆ ಮುರಿಯುವ ಸಾಧ್ಯತೆ ಇತ್ತು. 
ಈ ಪಂದ್ಯದಲ್ಲಿ ಟೀಂ ಇಂಡಿಯಾ 358 ರನ್ ದಾಖಲಿಸಿತು. ಗುರಿ ಬೆನ್ನಟ್ಟಿದ್ದ ಐರ್ಲೆಂಡ್ 109 ರನ್ ಗಳಿಗೆ ಆಲೌಟ್ ಆಗಿದ್ದು ಭಾರತ 249 ರನ್ ಗಳಿಂದ ಭರ್ಜರಿ ಜಯ ಗಳಿಸಿತು. 
SCROLL FOR NEXT