ಸಂಗ್ರಹ ಚಿತ್ರ 
ಕ್ರಿಕೆಟ್

ರಣಜಿ ಸಂಭಾವನೆ ವಿಚಾರ: ಕೋಚ್ ಅನಿಲ್ ಕುಂಬ್ಳೆಗೆ ಭಜ್ಜಿ ಪತ್ರ!

ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ದೇಶೀ ಕ್ರಿಕೆಟಿಗರ ಪರ ಬ್ಯಾಟ್ ಬೀಸಿದ್ದು, ರಣಜಿ ಆಟಗಾರರ ಸಂಭಾವನೆ ಹೆಚ್ಚಿಸುವಂತೆ ಕೋಚ್ ಅನಿಲ್ ಕುಂಬ್ಳೆ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ನವದೆಹಲಿ: ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ದೇಶೀ ಕ್ರಿಕೆಟಿಗರ ಪರ ಬ್ಯಾಟ್ ಬೀಸಿದ್ದು, ರಣಜಿ ಆಟಗಾರರ ಸಂಭಾವನೆ ಹೆಚ್ಚಿಸುವಂತೆ ಕೋಚ್ ಅನಿಲ್ ಕುಂಬ್ಳೆ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಮೂಲಗಳ ಪ್ರಕಾರ ಇದೇ ಮೇ 21ರಂದು ಸಿಒಎ ಅಧಿಕಾರಿಗಳೊಂದಿಗೆ ಅನಿಲ್ ಕುಂಬ್ಳೆ ಚರ್ಚೆ ನಡೆಸಲಿದ್ದು, ಕ್ರಿಕೆಟ್ ಆಟಗಾರರ ಸಂಭಾವನೆ ಕುರಿತು ಚರ್ಚಿಸಲಿದ್ದಾರೆ. ಇದೇ ಕಾರಣಕ್ಕೆ ಭಜ್ಜಿ ಕೋಚ್ ಅನಿಲ್ ಕುಂಬ್ಳೆ ಅವರಿಗೆ ಪತ್ರ  ಬರೆದಿದ್ದು, ದೇಶೀ ಕ್ರಿಕೆಟಿಗರ ಸಂಭಾವನೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ದೇಶೀ ಕ್ರಿಕೆಟಿಗರ ಹಣಕಾಸಿನ ಸಮಸ್ಯೆಯ ಬಗ್ಗೆ ಬಿಸಿಸಿಐ ಗಮನಕ್ಕೆ ತರುವಂತೆ ಭಜ್ಜಿ  ಪತ್ರ ಬರೆದಿದ್ದು, ಮೇ 21 ರಂದು ಕುಂಬ್ಳೆ ಬಿಸಿಸಿಐನ ಆಡಳಿತಾಧಿಕಾರಿಗಳ ಎದುರು ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಲಿದ್ದಾರೆ.

"ದೇಶೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಆಟಗಾರರಿಗೆ ಕೇವಲ 1.5 ಲಕ್ಷ ರೂ. ಸಂಭಾವನೆ ಸಿಗುತ್ತಿದ್ದು, ಕಳೆದ ಎರಡು ಮೂರು ವರ್ಷಗಳಿಂದ ರಣಜಿ ಆಡುವವನಾಗಿ ನನ್ನ ಸಹ ಆಟಗಾರರು ಹಣಕಾಸಿನ ವಿಚಾರಕ್ಕೆ  ಪರದಾಡುವುದನ್ನು ನೋಡಿದ್ದೇನೆ. ದಯಮಾಡಿ ಇವರ ಸಮಸ್ಯೆಯತ್ತ ಬಿಸಿಸಿಐ ಗಮನಹರಿಸುವಂತೆ ಮಾಡಿ’ ಎಂದು ಭಜಿ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT