ಮುಂಬೈ ಇಂಡಿಯನ್ಸ್ 
ಕ್ರಿಕೆಟ್

ಮುಂಬೈ ಇಂಡಿಯನ್ಸ್ ಮುಡಿಗೇರಿದ ಐಪಿಎಲ್ 2017 ಚಾಂಪಿಯನ್ಸ್ ಟ್ರೋಫಿ

ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2017 ರ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್-ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2017 ರ ಅಂತಿಮ ಪಂದ್ಯದಲ್ಲಿ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಿಂದ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 
ನಿಗದಿತ 20 ಓವರ್ ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗಳ ನಷ್ಟಕ್ಕೆ 129 ರನ್ ಗಳನ್ನು ಕಲೆಹಾಕಿ ಆರ್ ಪಿಎಸ್ ತಂಡಕ್ಕೆ 130 ರನ್ ಗಳ ಗುರಿ ನೀಡಿತ್ತು. ಮುಂಬೈ ಇಂಡಿಯನ್ಸ್ ತಂಡವನ್ನು 129 ರನ್ ಗಳಿಗೆ ಕಟ್ಟಿಹಾಕುವುದರಲ್ಲಿ ಆರ್ ಪಿಎಸ್ ಪರ ಬೌಲರ್ ಗಳಾದ ಜಯದೇವ್ ಉನಾಡ್ಕಟ್ ಹಾಗೂ ಡ್ಯಾನ್ ಕ್ರಿಶ್ಚಿಯನ್ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ ಇಂಡಿಯನ್ಸ್ ಪರ ಕೃನಾಲ್ ಪಾಂಡ್ಯ ಅತ್ಯಂತ ಹೆಚ್ಚು ಅಂದರೆ 38 ಎಸೆತಗಳಲ್ಲಿ 47 ರನ್ ಗಳನ್ನು ದಾಖಲಿಸಿ ತಂಡ  129 ರನ್ ಗಳನ್ನು ಪೇರಿಸಲು ನೆರವಾದರು. 
ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ ರನ್ ಗುರಿಯನ್ನು ಬೆನ್ನಟ್ಟಿದ ಆರ್ ಪಿಎಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸ್ಟೀವ್ ಸ್ಮಿತ್ ಹಾಗೂ ಎಂಎಸ್ ಧೋನಿಯ ಸಮಯೋಚಿತ ಆಟ ನೆರವಾಯಿತಾದರೂ ಕೊನೆ ಕ್ಷಣದಲ್ಲಿ ಸರಣಿ ವಿಕೆಟ್ ಪತನ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿತು. ತಂಡ 17 ರನ್ ಗಳನ್ನು ಗಳಿಸಿದ್ದಾಗ ಪ್ರಾರಂಭಿಕ ಆಟಗಾರ ರಾಹುಲ್ ತ್ರಿಪಾಟಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಸ್ಟೀವ್ ಸ್ಮಿತ್ ಹಾಗೂ ಅಜಿಂಕ್ಯಾ ರೆಹಾನೆ ತಂಡಕ್ಕೆ ಆಸರೆಯಾದರು. 
ಆದರೆ ಅಜಿಂಕ್ಯಾ ರೆಹಾನೆ 44 ರನ್ ಗಳಿಸುತ್ತಿದ್ದಂತೆಯೇ ವಿಕೆತ್ ಒಪ್ಪಿಸಿದಾಗ ತಂಡದ ಮೊತ್ತ ಕೇವಲ 71.  ನಂತರ ಕೆಲಕಾಲ ಧೋನಿ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟ ಆಡಿದರಾದರೂ ಧೋನಿ ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಗೆಲುವಿಗೆ 7 ರನ್ ಅಗತ್ಯವಿದ್ದಾಗ ಸ್ಟೀವ್ ಸ್ಮಿತ್ ಸಹ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಮಹತ್ವದ ಘಟ್ಟದಲ್ಲಿ ಹಿನ್ನೆಡೆ ಉಂಟಾಗಲು ಕಾರಣವಾಯಿತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ

ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ