ನವದೆಹಲಿ: ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನ ಚರಿತ್ರೆ ಆಧಾರಿತ ಚಿತ್ರ “ಸಚಿನ್ ಎ ಬಿಲಿಯನ್ ಡ್ರೀಮ್ಸ್” ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಮೇ 26 ರಂದು ಬಿಡುಗಡೆಯಾದ ಚಿತ್ರವು ಮೊದಲ ದಿನವೇ ಬರೋಬ್ಬರಿ 8 ಕೋಟಿ ರೂ ಹಣ ಸಂಗ್ರಹಿಸಿದೆ ಎಂದು ಪ್ರಸಿದ್ಧ ವ್ಯಾಪಾರ ವಿಶ್ಲೇಷಕ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಇಂಗ್ಲೀಷ್ಭಾಷೆಯ ಸಿನಿಮಾ ಬಿಡುಗಡೆಯಾಗಿದೆ.
ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ನೆನಪುಗಳನ್ನು ಸಹ ಹಿರಿತೆರೆ ಮೇಲೆ ತೋರಿಸಲಾಗಿದೆ. ಮುಖ್ಯವಾಗಿ ಕ್ರಿಕೆಟ್ ಜಗತ್ತಿಗೆ ಸಚಿನ್ ಆಗಮನ, ಅವರ ಸಾಧನೆ, ದಾಖಲೆಗಳು ಹೀಗೆ ಎಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರವನ್ನು ಜೇಮ್ಸ್ಎರಸ್ಕಿನ್ ನಿರ್ದೇಶಿಸಿದ್ದು, ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.