ಸಚಿನ್ ತೆಂಡೂಲ್ಕರ್-ವೀರೇಂದ್ರ ಸೆಹ್ವಾಗ್
ನವದೆಹಲಿ: ಬಾಲಿವುಡ್ ನಲ್ಲಿ ಇದೀಗ ಎಲ್ಲೆಡೆ ಸಚಿನ್:ಎ ಬಿಲಿಯನ್ ಡ್ರೀಮ್ಸ್ ಚಿತ್ರದ್ದೇ ಚರ್ಚೆ. ಇದೇ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಮತ್ತು ಚಿತ್ರರಂಗದ ಸೆಲೆಬ್ರೆಟಿಗಳಿಗೆ ಸಚಿನ್ ತಮ್ಮ ಸಿನಿಮಾವನ್ನು ತೋರಿಸಿದ್ದಾರೆ. ಆದರೆ ಸಚಿನ್ ಸಿನಿಮಾಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತ್ರ ಗೈರಾಗಿದ್ದರು.
ತಾವು ಸಚಿನ್ ಚಿತ್ರಕ್ಕೆ ಗೈರಾಗಿರುವುದಕ್ಕೆ ಸೆಹ್ವಾಗ್ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸೆಹ್ವಾಗ್ ಸಿನಿಮಾಗೆ ಹೋಗದೇ ಇರುವುದಕ್ಕೆ ಅವರ ಹೆಂಡತಿ ಕಾರಣವಂತೆ. ಇದನ್ನು ಸೆಹ್ವಾಗ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ. ನಾನು ಸಿನಿಮಾ ನೋಡಲು ಹೊರಟಿದ್ದೇ ಅಷ್ಟರಲ್ಲೇ ಪತ್ನಿ ಅವರನ್ನು ರಜೆಗೆಂದು ಬೇರೆ ಕಡೆ ಕರೆದುಕೊಂಡು ಹೋದರಂತೆ. ಬೇರೆ ದಾರಿಯಿಲ್ಲದೇ ಸಿನಿಮಾ ನೋಡದೇ ಸುಮ್ಮನಾದೆ ಎಂದು ವೀರೂ ಬೇಸರ ವ್ಯಕ್ತಪಡಿಸಿದ್ದಾರೆ.
ದೇವರಾದರೆ ಪ್ರಸಾದ ಕೊಟ್ಟು ಸುಮ್ಮನಾಗುತ್ತಾನೆ, ಪತ್ನಿ ಅದನ್ನೆಲ್ಲ ಕೇಳುತ್ತಾಳೆಯೇ? ಎಂದು ಸೆಹ್ವಾಗ್ ಅಸಹಾಯಕರಾಗಿ ಪ್ರಶ್ನಿಸಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಒಬ್ಬ ಅಸಾಧಾರಣ ವ್ಯಕ್ತಿ. ಅವರ ಜೀವನ ಪ್ರಭಾವಿಸುವಷ್ಟು ಬೇರಾರ ಜೀವನವೂ ಪ್ರಭಾವಿಸುವುದಿಲ್ಲ. ಅದನ್ನು ನೋಡಲು ನಾನಂತೂ ಸ್ವಲ್ಪ ಹಣ ಖರ್ಚು ಮಾಡಲು ತಯಾರಿದ್ದೇನೆ. ನೀವೂ ನೋಡಿ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.