ಕ್ರಿಕೆಟಿಗ ಭುವನೇಶ್ವರ್ ಕುಮಾರ್ಗೆ ಕೂಡಿ ಬಂದ ಕಂಕಣ ಭಾಗ್ಯ
ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಗೆ ಕಂಕಣ ಭಾಗ್ಯ ಕೂಡಿಬಂದಿದ್ದು ಪ್ರೇಯಸಿ ನೂಪುರ್ ನಗರ್ ಜತೆ ನವೆಂಬರ್ 23ರಂದು ದಾಂಪತ್ಯ ಜೀವನಕ್ಕೆ...
ಮೀರತ್: ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಗೆ ಕಂಕಣ ಭಾಗ್ಯ ಕೂಡಿಬಂದಿದ್ದು ಪ್ರೇಯಸಿ ನೂಪುರ್ ನಗರ್ ಜತೆ ನವೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಭುವನೇಶ್ವರ್ ಕುಮಾರ್ ಮದುವೆ ಕುರಿತಂತೆ ಭುವಿ ತಂದೆ ಕಿರಣ್ ಪಾಲ್ ಸಿಂಗ್ ಮಾಹಿತಿ ನೀಡಿದ್ದು ನವೆಂಬರ್ 23ರಂದು ಮೀರತ್ ನಲ್ಲಿ ಭುವಿ ಮದುವೆ ಸಮಾರಂಭ ನಡೆಯಲಿದ್ದು ನವೆಂಬರ್ 26 ಮೀರತ್ ನಲ್ಲಿ ಹಾಗೂ 30ರಂದು ನವದೆಹಲಿಯಲ್ಲಿ ಔತಣಕೂಟ ಏರ್ಪಡಿಸಲಾಗುವುದು ಎಂದರು.
ನೂಪುರ್ ನಗರ್ ಗ್ರೇಟರ್ ನೊಯ್ಡಾ ನಿವಾಸಿಯಾಗಿದ್ದು, ಇಂಜಿನಿಯರಿಂಗ್ ವೃತ್ತಿಯಲ್ಲಿದ್ದಾರೆ. ಈ ಹಿಂದೆ ಭುವನೇಶ್ವರ್ ಕುಮಾರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರೇಯಸಿ ಜತೆಗೆ ಕುಳಿತಿರುವ ಫೋಟೋ ಹಾಕಿದ್ದರು. ಆ ನಂತರ ಭುವನೇಶ್ವರ್ ಮದುವೆ ಕುರಿತಂತೆ ಮಾತುಗಳು ಕೇಳಿಬಂದಿದ್ದವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.