ಕ್ರಿಕೆಟ್

ತಂಡಕ್ಕೆ ಆಯ್ಕೆಯಾಗಿಲ್ಲ ಎಂದಾಗ ಬದುಕಬೇಕೆಂದು ಅನಿಸಲಿಲ್ಲ: ಕುಲದೀಪ್ ಯಾದವ್

Vishwanath S
ನವದೆಹಲಿ: ಟೀಂ ಇಂಡಿಯಾದ ಯುವ ಸ್ಪಿನ್ನರ್ ಚೀನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು 15 ವರ್ಷದೊಳಗಿನವರ ಉತ್ತರಪ್ರದೇಶದ ತಂಡದ ಪರ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ 13ನೇ ವಯಸ್ಸಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿದ್ದಾರೆ. 
ಶಾಲೆಯಲ್ಲಿ ಓದುವಾಗ ನಾನು ಪ್ರಶಂಸನೀಯ ವಿದ್ಯಾರ್ಥಿಯಾಗಿದ್ದೆ. ಆರಂಭದ ದಿನಗಳಲ್ಲಿ ಕ್ರಿಕೆಟ್ ಒಂದು ಮೋಜಿನ ಆಟವೆನಿಸಿತ್ತು. ಆದರೆ ಮುಂದಿನ ದಿನಗಳಲ್ಲಿ ಅದನ್ನೇ ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ. 13ನೇ ವಯಸ್ಸಿನವನಾಗಿದ್ದಾಗ ನನ್ನನ್ನು ಆಯ್ಕೆಗಾರರು ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ. 
ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ ಕುಲದೀಪ್ ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು. ನಂತರ ತಂಡದಲ್ಲಿ ಆಯ್ಕೆಯಾಗಬೇಕೆಂದು ನಾನು ಕಠಿಣ ಅಭ್ಯಾಸ ನಡೆಸಿದೆ. ಆದರೆ ನಾನು ಆಯ್ಕೆಯಾಗಲಿಲ್ಲ. ಇದರಿಂದಾಗಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಕುಲದೀಪ್ ಯಾದವ್ ಅವರು ಹೇಳಿದ್ದಾರೆ. 
ಟೀಂ ಇಂಡಿಯಾ ತಂಡದಲ್ಲಿ ಯಶಸ್ವಿ ಬೌಲರ್ ಆಗಿರುವ ಕುಲದೀಪ್ ಯಾದವ್ ನವೆಂಬರ್ 16ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. 
SCROLL FOR NEXT