ಕ್ರಿಕೆಟ್

50 ಶತಕ ನಿಜಕ್ಕೂ ಸಂತೋಷ, ಆದರೆ ಸಾಧನೆಯ ಹಾದಿ ಇನ್ನೂ ಇದೆ: ವಿರಾಟ್ ಕೊಹ್ಲಿ

Vishwanath S
ಕೋಲ್ಕತ್ತಾ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50ನೇ ಶತಕ ಸಿಡಿಸಿದ ಸಂಭ್ರಮದಲ್ಲಿದ್ದು, 50ನೇ ಶತಕ ಸಿಡಿಸಿರುವುದು ನಿಜಕ್ಕೂ ಸಂತೋಷ ತಂದಿದೆ. ಆದರೆ ಸಾಧನೆಯ ಹಾದಿ ಇನ್ನೂ ಇದೆ ಎಂದು ಹೇಳಿದ್ದಾರೆ. 
29 ವರ್ಷದ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಲ್ಲಿ ಶತಕ ಸಿಡಿಸಿದ್ದು ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಅವರ 18ನೇ ಶತಕವಾಗಿದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50ನೇ ಶತಕ ಸಿಡಿಸಿದ ವಿಶ್ವದ 8ನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 
ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತಮ್ಮ ಸಾಧನೆ ಬಗ್ಗೆ ಈ ರೀತಿ ಹೇಳಿದ್ದಾರೆ. 
ನನ್ನ ಅತ್ಯುತ್ತಮ ಪ್ರದರ್ಶನ, ನಾನು ಹೊಂದಿರುವ ನೂರಾರು ಸಂಖ್ಯೆಗಳ ಕುರಿತು ಯೋಚಿಸುವುದಕ್ಕಿಂತ ಹೆಚ್ಚು ಆನಂದ ನೀಡುತ್ತದೆ. ನಾನು ಈ ಆಟವನ್ನು ಆಡುವ ತನಕ ಅದು ಮನಸ್ಸಿನಲ್ಲಿ ಉಳಿಯುತ್ತದೆ ಎಂದರು. 
ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಟೀಂ ಇಂಡಿಯಾ ಬೌಲರ್ ಗಳು ಭರ್ಜರಿ ಪ್ರದರ್ಶನವನ್ನು ನೀಡಿ ಲಂಕಾವನ್ನು ಸೋಲಿಸುವ ಭರವಸೆ ನೀಡಿದರು. ಆದರೂ ಮೂರು ವಿಕೆಟ್ ಗಳ ಅಂತರದಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ತಂಡದ ಬೌಲರ್ ಗಳ ಪರಿಶ್ರಮ ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ.  
SCROLL FOR NEXT