ಮಾಯಾಂಕ್ ಅಗರ್ವಾಲ್ 
ಕ್ರಿಕೆಟ್

ರಣಜಿ ಕ್ರಿಕೆಟ್: 90 ವರ್ಷದ ದಾಖಲೆ ಸರಿಗಟ್ಟಿದ ಕನ್ನಡಿಗ ಮಾಯಾಂಕ್ ಅಗರ್ವಾಲ್!

ಕರ್ನಾಟಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ರಣಜಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು 90 ವರ್ಷಗಳ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ ಎಂದು...

ನವದೆಹಲಿ: ಕರ್ನಾಟಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ರಣಜಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು 90 ವರ್ಷಗಳ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ ಎಂದು ವರದಿಯಾಗಿದೆ. 
ಇಂತಹ ಒಂದು ಸಾಧನೆಯನ್ನು ಕ್ರಿಕೆಟ್ ನ ಸಾರ್ವಕಾಲಿಕ ಶ್ರೇಷ್ಠ ಸರ್ ಡೊನಾಲ್ಡ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಮಾಡಿಲ್ಲ ಎನ್ನುವುದು ಗಮನಾರ್ಹ. ಮಾಯಾಂಕ್ ಈ ನವೆಂಬರ್ ತಿಂಗಳಲ್ಲಿ ಭರ್ಜರಿ 5 ಶತಕದೊಂದಿಗೆ 1033 ರನ್ ಗಳಿಸಿದ್ದಾರೆ. ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳನ್ನು ವಿಶ್ವದಲ್ಲಿ ಇಬ್ಬರು ಮಾತ್ರ ಗಳಿಸಿದ್ದಾರೆನ್ನಲಾಗಿದೆ. 
1927ರ ಡಿಸೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದ ಬಿಲ್ ಪಾನ್ಸ್ ಫೋರ್ಡ್ 1,146 ರನ್ ಗಳನ್ನು ಗಳಿಸಿದ್ದರು. ಅವರನ್ನು ಬಿಟ್ಟರೆ ಮಾಯಾಂಕ್ ಮಾತ್ರ ಸಾವಿರ ರನ್ ದಾಟಿರುವುದಂತೆ. ಮಾಯಾಂಕ್ ತಮ್ಮ ಈ ಅಬ್ಬರದ ಸಾಧನೆ ವೇಳೆ 304, 176, 23, 90, 133, 173, 134 ರನ್ ಗಳಿಸಿದ್ದಾರೆ. ಇದೇ ಕಾರಣಕ್ಕೆ ಮಾಯಾಂಕ್ ಇತಿಹಾಸದ ಪುಟಕ್ಕೆ ಸೇರಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉತ್ತರಾಖಂಡದಲ್ಲಿ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ, ಮನೆಗಳು ಕುಸಿದು ಐವರು ನಾಪತ್ತೆ

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಸಿಂಹ ಅಲ್ಲ 'ನಾಯಿ' ಎಂದು ಹೆಸರಿಡಬೇಕಿತ್ತು: ಕಚ್ಚೆ ಹರುಕನಿಗೆ ಟಿಕೆಟ್ ಕೊಡದೆ ಬಿಜೆಪಿಯವರೇ ಕ್ಯಾಕರಿಸಿ ಉಗಿದು ಮನೆಯಲ್ಲಿ ಕೂರಿಸಿದ್ದಾರೆ!

ಮರು ಎಣಿಕೆಯಲ್ಲಿ ಮಂಜುನಾಥ್ ಗೆದ್ದರೆ ರಾಜಕೀಯ ನಿವೃತ್ತಿ: ಮಾಲೂರು ಶಾಸಕ ನಂಜೇಗೌಡ

SCROLL FOR NEXT