ನವದೆಹಲಿ: ಸ್ಲೆಡ್ಜಿಂಗ್ ಮಾಡಿ ಎದುರಾಳಿ ಆಟಗಾರರ ಮನಸ್ಥಿತಿಯನ್ನು ಕೆಡಿಸುವುದರಲ್ಲಿ ಆಸ್ಟ್ರೇಲಿಯಾ ಆಟಗಾರರು ನಿಸ್ಸಿಮರು. ಅಂತಹ ಆಸ್ಟ್ರೇಲಿಯಾ ಆಟಗಾರರು ಭಾರತ ಪ್ರವಾಸದಲ್ಲಿ ಈ ಬಾರಿ ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡದೇ ಇರುವುದು ಸೋಜಿಗವೆನಿಸಿದೆ.
ಆಸ್ಟ್ರೇಲಿಯಾ ಕ್ರಿಕೆಟರ್ಸ್ ಸದ್ಯ ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡದೇ ಇರುವುದಕ್ಕೆ ಐಪಿಎಲ್ ಕಾರಣವಂತೆ. ಹೀಗಂತ ಹೇಳಿದ್ದು ಬೇರ್ಯಾರು ಅಲ್ಲ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್.
ಭಾರತೀಯ ಆಟಗಾರರೊಂದಿಗೆ ಕಿರಿಕ್ ಮಾಡಿಕೊಂಡರೇ ಮುಂದಿನ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ಭಾರತದ ಫ್ರಾಂಚೈಸಿಗಳು ಆಸ್ಟ್ರೇಲಿಯಾ ಆಟಗಾರರ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡುವುದಿಲ್ಲ ಎಂಬ ಚಿಂತೆಯಲ್ಲಿ ಅವರಿರಬಹುದು ಎಂದು ಸೆಹ್ವಾಗ್ ಹೇಳಿದ್ದಾರೆ.
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 1-4ರ ಅಂತರದಲ್ಲಿ ಸೋತಿದೆ. ಇನ್ನು ಮುಂದಿನ ಶನಿವಾರದಿಂದ ಟಿ20 ಸರಣಿ ಸಹ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos