ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್
ಮೆಲ್ಬೋರ್ನ್: ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಗಾಯದ ಸಮಸ್ಯೆ ಕಾರಣ ಭಾರತ ತಂಡದ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಗೆ ಮರಳಲಿದ್ದಾರೆ.
ಸ್ಮಿತ್ ಬಲ ಭುಜದಲ್ಲಿ ಗಾಯವಾಗಿರುವ ಕಾರಣ ಅವರು ಪ್ರವಾಸದಿಂದ ಹಿಂದಿರುಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಇಂದು ತಿಳಿಸಿದೆ.
ಭಾರತ ವಿರುದ್ಧ ಆಸ್ಟ್ರೇಲಿಯಾ, ತಮ್ಮ ಐದು ಪಂದ್ಯಗಳ ಏಕದಿನ ಸರಣಿಯನ್ನು 4-1 ಅಂತರದಿಂದ ಕಳೆದುಕೊಂಡಿದ್ದು ಇಂದಿನಿಂದ ಮೂರು ಪಂದ್ಯಗಳ ಟ್ವೆಂಟಿ -20 ಸರಣಿ ಪ್ರಾರಂಭಗೊಳ್ಳಲಿದೆ.
ಉಪ ನಾಯಕ ಡೇವಿಡ್ ವಾರ್ನರ್ ಸ್ಮಿತ್ ಅನುಪಸ್ಥ್ಗಿತಿಯಲ್ಲಿ ನಾಯಕನಾಗಿ ತಂದವನ್ನು ಮುನ್ನಡೆಸಲಿದ್ದಾರೆ. ಇವರೊದನೆ ಮಾರ್ಕಸ್ ಸ್ಟೊಯಿನಿಸ್ ತಂಡದಲ್ಲಿ ಸ್ಮಿತ್ ಸ್ಥಾನವನ್ನು ತುಂಬಲಿದ್ದಾರೆ.
"ಭಾನುವಾರ ನಡೆದ ಭಾರತ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಸ್ಮಿತ್ ಬಲ ಭುಜಕ್ಕೆ ಗಾಯವಾಗಿತ್ತು. ಪಂದ್ಯದ ಬಳಿಕ ಅವರು ಭುಜದ ನೋವಿನ ಕುರಿತು ಹೇಳಿದ್ದರು" ಆಸ್ಟ್ರೇಲಿಯಾದ ತಂಡದ ವೈದ್ಯ ರಿಚರ್ಡ್ ಸಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics