ಕ್ರಿಕೆಟ್

ನುಪುರ್ ನಗರ್ ಜೊತೆ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ನಿಶ್ಚಿತಾರ್ಥ

Raghavendra Adiga
ನವದೆಹಲಿ:: ಭಾರತ ಕ್ರಿಕೆಟ್ ತಂಡದ ಮಹತ್ವದ ಆಟಗಾರ  ಭುವನೇಶ್ವರ್ ಕುಮಾರ್, ವೈವಾಹಿಕ ಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಐದು ತಿಂಗಳ ಹಿಂದೆಯೇ ತಮ್ಮ ಅರ್ಧಾಂಗಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದ ಭುವನೇಶ್ವರ ಕುಮಾರ್ ಕೆಲವು ದಿನಗಳ ಹಿಂದೆ ಭಾವಿ ಪತ್ನಿ ಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅ. 4 ರಂದು ಗ್ರೇಟರ್ ನೋಯ್ಡಾದಲ್ಲಿ ನಡೆದ ಸಮಾರಂಭದಲ್ಲಿ ನುಪುರ್ ನಗರ್ ಎನ್ನುವವರೊಡನೆ ಭುವನೇಶ್ವರ್ ನಿಶ್ಚಿತಾರ್ಥ ನಡೆದಿದೆ. ಇಬ್ಬರ ವಿವಾಹ ಇದೇ ಡಿಸೆಂಬರ್ ನಲ್ಲಿ ನಡೆವ ಸಾಧ್ಯತೆ ಇದೆ.
27ರ ಹರೆಯದ ಭಾರತೀಯ ವೇಗದ ಬೌಲರ್ ಭುವನೇಶ್ವರ್ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸಿದ್ದಾರೆ.
SCROLL FOR NEXT