ಬ್ಯಾಟ್ ಗಾತ್ರದ ಬದಲಾವಣೆಯಿಂದ ಪಂದ್ಯದ ಮೇಲೆ ಪರಿಣಾಮ: ರಾಹುಲ್ ದ್ರಾವಿಡ್
ಬ್ಯಾಟ್ ಗಾತ್ರಕ್ಕೆ ಸಂಬಂಧಿಸಿದ ಐಸಿಸಿಯ ಹೊಸ ನಿಯಮಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾತನಾಡಿದ್ದು, ಬ್ಯಾಟ್ ಗಾತ್ರದ ಬದಲಾವಣೆ ಪಂದ್ಯದ ಮೇಲೆ ಪರಿಣಾಮ ಬೀರಲಿದೆ...
ನವದೆಹಲಿ: ಬ್ಯಾಟ್ ಗಾತ್ರಕ್ಕೆ ಸಂಬಂಧಿಸಿದ ಐಸಿಸಿಯ ಹೊಸ ನಿಯಮಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾತನಾಡಿದ್ದು, ಬ್ಯಾಟ್ ಗಾತ್ರದ ಬದಲಾವಣೆ ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಹೊಸ ನಿಯಮದ ಪ್ರಕಾರ ಬ್ಯಾಟ್ ನ ಗಾತ್ರವನ್ನು 108 ಎಂಎಂ ಅಗಲ ಬ್ಯಾಟ್ ಮಧ್ಯಭಾಗ 67ಎಂಎಂ ದಪ್ಪವಿರಬೇಕು ಮತ್ತು ಬ್ಯಾಟ್ ಮೇಲ್ಬಾಗದ ದಪ್ಪ 40 ಎಂಎಂ ಮೀರಬಾರದು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಪಂದ್ಯದ ಮೇಲೆ ಪರಿಣಾಮ ಬೀರಲಿದೆ. ಕೆಲವೇ ಮಂದಿ ಆಟಗಾರರು ಈ ನಿಯಮದಲ್ಲಿ ಹೇಳಿರುವ ಅಳತೆಗಿಂತ ಭಿನ್ನವಾದ ಅಳತೆಯ ಬ್ಯಾಟ್ ನ್ನು ಬಳಕೆ ಮಾಡುತ್ತಿದ್ದ ಕಾರಣ ಬದಲಾವಣೆ ತೀವ್ರವಾಗಿರುವುದಿಲ್ಲ, ಇದು ಒಳ್ಳೆಯ ನಿರ್ಧಾರ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.