ನವದೆಹಲಿ: ಮ್ಯಾಚ್ ಫಿಕ್ಸಿಂಗ್ ಸಂಬಂಧ ಇಬ್ಬರು ವರ್ಷ ನಿಷೇಧಕ್ಕೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‍ಕೆ) ತಂಡ 2018ರ ಐಪಿಎಲ್ ಗೆ ವಾಪಸಾಗುತ್ತಿದೆ. ಇನ್ನು ಸಿಎಸ್‍ಕೆ ತಂಡವನ್ನು ಎಂಟು ವರ್ಷಗಳ ಕಾಲ ಮುನ್ನಡೆಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಿವೆ.
ಇನ್ನು ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಳ್ಳುವ ಸಾಧ್ಯತೆ ಇದೆ. ರೈಸಿಂಗ್ ಪುಣೆ ಸೂಪರ್ ಜೈಂಟ್ ಹಾಗೂ ಗುಜರಾತ್ ಲಯನ್ಸ್ ತಂಡಗಳಳ್ಲಿ ಆಡಿದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದ್ದು ಒಂದೊಮ್ಮೆ ಫ್ರಾಂಚೈಸಿಗಳು ಒಪ್ಪಿಕೊಂಡರೆ ನಿರೀಕ್ಷೆಯಂತೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳಲಿದ್ದಾರೆ.
ಕಳೆದೆರಡು ಆವೃತ್ತಿಗಲ್ಲಿ ಪುಣೆ ಸೂಪರ್ ಜೈಂಟ್ ಪರ ಎಂಎಸ್ ಧೋನಿ ಆಡಿದ್ದರು. ಇದೇ ವೇಳೆ ಸಿಎಸ್‍ಕೆ ತಂಡ ತಾರಾ ಆಟಗಾರರಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಗುಜರಾತ್ ತಂಡವನ್ನು ಪ್ರತಿನಿಧಿಸಿದ್ದರು. ಈ ಮೂರು ಆಟಗಾರರು ಸಿಎಸ್ಕೆಗೆ ವಾಪಸಾಗಬೇಕು ಎನ್ನುವುದು ಅಭಿಮಾನಿಗಳ ಆಶಯವಾಗಿದೆ.