ಕ್ರಿಕೆಟ್

ವಿದಾಯದ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್ ಚಾಕಚಕ್ಯತೆ ಮೂಲಕ ಗಮನ ಸೆಳೆದ ನೆಹ್ರಾ!

Srinivasamurthy VN
ನವದೆಹಲಿ: ಭಾರತ ತಂಡ ಹಿರಿಯ ಆಟಗಾರ ಆಶೀಶ್ ನೆಹ್ರಾ ಓರ್ವ ಅದ್ಬುತ ಬೌಲಕ್ ಎಂದೇ ಎಲ್ಲರಿಗೂ ಪರಿಚಯವಾಗಿತ್ತು. ಆದರೆ ತಮ್ಮೊಳಗೆ ಓರ್ವ ಚಾಕಚಕ್ಯತೆಯ ಫೀಲ್ಡರ್ ಕೂಡ ಇದ್ದಾನೆ ಎಂಬುದನ್ನು ತಮ್ಮ ಅಂತಿಮ ವಿದಾಯದ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ.
ನ್ಯೂಜಿಲೆಂಡ್ ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ ಚಾಹಲ್ ಎಸೆದ 4ನೇ ಎಸೆತವನ್ನು ಕಿವೀಸ್ ಪಡೆಯ ಸೌಥಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು, ಈ ವೇಳೆ ಚೆಂಡ ಅವರನ್ನು ವಂಚಿಸಿ ವಿಕೆಟ್ ಹಿಂದೆ ವೇಗವಾಗಿ ಹೋಗುತ್ತಿತ್ತು. ಈ ಹಂತದಲ್ಲಿ ಫೈನ್ ಲೆಗ್ ಗೆ ಓಡಿ ಬಂದ ನೆಹ್ರಾ  ಕಾಲಿನಲ್ಲಿ ಚೆಂಡನ್ನು ತಡೆದರು. ಕೂಡಲೇ ಚೆಂಡು ಮೇಲೆ ಹಾರಿತು. ಈ ವೇಳೆ ಚೆಂಡನ್ನು ನೆಹ್ರಾ ಹಿಡಿದ ಪರಿ ಹಾಗೂ ಅದನ್ನು ಕೂಡಲೇ ವಿಕೆಟ್ ನತ್ತ ಎಸೆದ ಪರಿ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿಕೂ ಅಚ್ಚರಿ ಮೂಡಿಸಿತ್ತು.
ನೆಹ್ರಾ ಅವರ ಫೀಲ್ಡಿಂಗ್ ಚಾಕಚಕ್ಯತೆಯನ್ನು ಕಂಡು ಸ್ವತಃ ಕ್ಯಾಪ್ಟನ್ ಕೊಹ್ಲಿಯೇ ಚಪ್ಪಾಳೆ ತಟ್ಟುವ ಮೂಲಕ ನೆಹ್ರಾ ಅವರನ್ನು ಹುರಿದುಂಬಿಸಿದರು.
ಇನ್ನು ಈ ನೆನಪಿನಲ್ಲಿಟ್ಟುಕೊಳ್ಳಬಹುದಾದ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಟ್ಯಾಗ್ ಮಾಡಿದೆ. ಏಕೆಂದರೆ ಯುವಿ ಕೂಡ ಅದ್ಬುತ ಫೀಲ್ಡರ್ ಆಗಿದ್ದು, ಈ ಹಿಂದೆ ಈ ರೀತಿಯ ಹಲವು ಚಾಕಚಕ್ಯತೆಯ ಫೀಲ್ಡಿಂಗ್ ಮೂಲಕ ತಂಡಕ್ಕೆ ರನ್ ಗಳನ್ನು  ರಕ್ಷಿಸಿಕೊಟ್ಟಿದ್ದಾರೆ.
SCROLL FOR NEXT