ನಿಗೆಲ್ ಲಾಂಗ್-ನಾಸಿರ್ ಹುಸೇನ್ 
ಕ್ರಿಕೆಟ್

ಮೈದಾನದಲ್ಲಿ ಅಂಪೈರ್‌ರಂತೆ ಬಾಂಗ್ಲಾ ಆಟಗಾರನಿಂದ ಹಾಸ್ಯಾತ್ಮಕ ಅಣುಕು

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರ ನಾಸಿರ್ ಹುಸೇನ್ ಮೈದಾನದಲ್ಲಿ ಅಂಪೈರ್ ರನ್ನು ಅಣುಕು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ...

ಢಾಕಾ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರ ನಾಸಿರ್ ಹುಸೇನ್ ಮೈದಾನದಲ್ಲಿ ಅಂಪೈರ್ ರನ್ನು ಅಣುಕು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. 
ಮೈದಾನದಲ್ಲಿ ಕ್ರಿಕೆಟ್ ಆಟಗಾರರ ನಡವಳಿಕೆಗಳು ಹೇಗಿರಬೇಕು ಎಂಬ ಪ್ರಶ್ನೆಗಳನ್ನು ಈ ಘಟನೆ ಪ್ರಶ್ನಿಸಿದೆ. ಆಸ್ಟ್ರೇಲಿಯಾ ಬ್ಯಾಟಿಂಗ್ ನಲ್ಲಿ 364 ರನ್ ಗಳಿಸಿದ್ದಾಗ ಆಸೀಸ್ ಪರ ಆಡುತ್ತಿದ್ದ ಪ್ಯಾಟ್ ಕಮ್ಮಿನ್ಸ್ ಎಲ್ಬಿಡಬ್ಲ್ಯೂ ಬಲೆಗೆ ಬೀಳುತ್ತಾರೆ. ಈ ವೇಳೆ ಅಂಪೈರ್ ನಿಗೆಲ್ ಲಾಂಗ್ ನಾಟ್ ಔಟ್ ತೀರ್ಪು ನೀಡುತ್ತಾರೆ. 
ಅಂಪೈರ್ ತೀರ್ಪನ್ನು ಬಾಂಗ್ಲಾದೇಶ ಆಟಗಾರರು ಪ್ರಶ್ನಿಸುತ್ತಾರೆ. ಇದನ್ನು ಪರಮರ್ಶಿಸಿದ ಮೂರನೇ ಅಂಪೈರ್ ಮೈದಾನದ ಅಂಪೈರ್ ಗೆ  ಔಟ್ ಎಂದು ತಿಳಿಸುತ್ತಾರೆ. ಆಗ ನಿಗಲ್ ಲಾಂಗ್ ತಮ್ಮ ತೀರ್ಪೀಗೆ ಕ್ಷಮೆಯಾಚಿಸಿ ಔಟ್ ಎಂದು ತೀರ್ಪು ನೀಡುತ್ತಾರೆ. ಆಗ ಬಾಂಗ್ಲಾದೇಶದ ಆಟಗಾರ ನಿಗಲ್ ಲಾಂಗ್ ರನ್ನು ಅಣುಕಿಸುವಂತೆ ಮಾಡುತ್ತಾರೆ. ಈ ಘಟನೆ ಆಟಗಾರ ಅಸಭ್ಯವರ್ತನೆಗೆ ಸಾಕ್ಷಿಯಾಗಿದೆ. 
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಇತಿಹಾಸ ಸೃಷ್ಠಿಸುವ ಅವಕಾಶವನ್ನು ಬಾಂಗ್ಲಾದೇಶ ಕಳೆದುಕೊಂಡಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?