ಸ್ಟೀವ್ ಸ್ಮಿತ್-ವಿರಾಟ್ ಕೊಹ್ಲಿ 
ಕ್ರಿಕೆಟ್

ಕೊಹ್ಲಿ ಮೇಲೆ ಸ್ಲೆಡ್ಜಿಂಗ್ ತಂತ್ರ ಬಳಿಸಿದರೇ ಅಪಾಯ ಕಟ್ಟಿಟ್ಟಬುತ್ತಿ: ಆಸ್ಟ್ರೇಲಿಯಾ ತಂಡಕ್ಕೆ ಗಿಲೆಸ್ಪಿ ಎಚ್ಚರಿಕೆ

ಸ್ಲೆಡ್ಜಿಂಗ್ ಮೂಲಕ ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸುವಲ್ಲಿ ಅಗ್ರಜರಾಗಿರುವ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಮಾಜಿ ಆಟಗಾರರೊಬ್ಬರು...

ನವದೆಹಲಿ: ಸ್ಲೆಡ್ಜಿಂಗ್ ಮೂಲಕ ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸುವಲ್ಲಿ ಅಗ್ರಜರಾಗಿರುವ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಮಾಜಿ ಆಟಗಾರರೊಬ್ಬರು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. 
ಇದೇ ಸೆಪ್ಟೆಂಬರ್ 17ರಂದು ಆರಂಭಗೊಳ್ಳಲಿರುವ ಟೀಂ ಇಂಡಿಯಾ ವಿರುದ್ಧದ ಸರಣಿಗಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಆಗಮಿಸಿದ್ದು, ನಾಯಕ ಸ್ಟೀವ್ ಸ್ಮಿತ್ ಪಡೆಗೆ ಮಾಜಿ ಕ್ರಿಕೆಟಿಗ ಜೇಸನ್ ಗಿಲೆಸ್ಪಿ ಟೀಂ ಇಂಡಿಯಾ ಜತೆ ಸ್ಲೆಡ್ಜಿಂಗ್ ತಂತ್ರವನ್ನು ಬಳಸಬೇಡಿ. ಅದರಲ್ಲೂ ಪ್ರಮುಖವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಟೆಗೆ ಹೋಗಬೇಡಿ ಎಂದು ಖಡರ್ ಎಚ್ಚರಿಕೆಯನ್ನು ನೀಡಿದ್ದಾರೆ. 
ವಿರಾಟ್ ಕೊಹ್ಲಿಯನ್ನು ಮಣಿಸಲು ಬೇಕಾದರೆ ಅಗ್ರೆಸ್ಸಿವ್ ಆಗಿ ಬೌಲಿಂಗ್ ಮಾಡಿ. ಅದನ್ನು ಬಿಟ್ಟು ಸ್ಲೆಡ್ಜಿಂಗ್ ತಂತ್ರವನ್ನು ಅವರ ಮೇಲೆ ಪ್ರಯೋಗಿಸದೇ ಅವರನ್ನು ಒಂಟಿಯಾಗಿ ಬಿಡಿ. ಕೊಹ್ಲಿ ಸ್ವಲ್ಪ ಕಾಲ ಪಿಚ್ ಗೆ ಅಡ್ಜೆಸ್ಟ್ ಆದರೆ ಅವರನ್ನು ತಡೆಯಲಾಗದು ಎಂದು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. 
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿರುವ 23 ಏಕದಿನ ಪಂದ್ಯಗಳ ಪೈಕಿ 55.6 ಸರಾಸರಿಯಲ್ಲಿ 1003 ರನ್ ಸಿಡಿಸಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾ ಆಟಗಾರರು ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡಿದಾಗ ರೊಚ್ಚಿಗೆದ್ದ ವಿರಾಟ್ ಚೊಚ್ಚಲ ಶತಕ ಸಿಡಿಸಿದ್ದರು. ನಂತರ ಆಸೀಸ್ ವಿರುದ್ಧದ ಸರಣಿಯಲ್ಲೂ 4 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT