ಕ್ರಿಕೆಟ್

ಪೆಪ್ಸಿ, ಫೇರ್ನೆಸ್ ಉತ್ಪನ್ನಗಳ ಜಾಹೀರಾತುಗಳಿಗೆ ವಿರಾಟ್ ಕೊಹ್ಲಿ ಗುಡ್ ಬೈ!

Srinivas Rao BV
ನವದೆಹಲಿ: ಇನ್ನು ಮುಂದೆ ಜಾಹೀರಾತುಗಳ ಮೂಲಕ ಪೆಪ್ಸಿ, ಫೇರ್ನೆಸ್ ಉತ್ಪನ್ನಗಳನ್ನು ಉತ್ತೇಜಿಸದಿರಲು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. 
ಜಂಕ್-ಫುಡ್ ಹಾಗೂ ದೇಶೀಯ ಉತ್ಪನ್ನವಲ್ಲದ ಕಾರಣಗಳಿಂದಾಗಿ ವಿರಾಟ್ ಕೋಹ್ಲಿ ಪೆಪ್ಸಿ ಹಾಗೂ ಫೇರ್ನೆಸ್ ಉತ್ಪನ್ನಗಳನ್ನು ಜಹೀರಾತು ಮೂಲಕ ಪ್ರೊಮೋಟ್ ಮಾಡದಿರಲು ಕೋಹ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಕೋಹ್ಲಿ ಉತ್ಪನ್ನಗಳನ್ನು ಪ್ರೊಮೋಟ್ ಮಾಡುವ ಜಾಹೀರಾತುಗಳಿಗೆ ಅತಿ ಹೆಚ್ಚು ಬೇಡಿಕೆಯುಳ್ಳ ಆಟಗಾರರಾಗಿದ್ದಾರೆ. 
ತಾವು ಬಳಕೆ ಮಾಡಿ, ವಿಶ್ವಾಸವುಳ್ಳ ಉತ್ಪನ್ನಗಳನ್ನು ಮಾತ್ರ ಪ್ರೊಮೋಟ್ ಮಾಡಲು ಕೋಹ್ಲಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಪೆಪ್ಸಿ ಕಂಪನಿಗೆ 2011 ರಿಂದ ಕೋಹ್ಲಿ ಜಾಹೀರಾತು ನೀಡುತ್ತಿದ್ದರು. ಆದರೆ ಕಳೆದ ಏಪ್ರಿಲ್ ನಲ್ಲಿ ಜಾಹೀರಾತು ಒಪ್ಪಂದವನ್ನು ನವೀಕರಿಸಲು ಕೋಹ್ಲಿ ನಿರಾಕರಿಸಿದ್ದು, ತಾನೇ ಬಳಕೆ ಮಾಡದ ಉತ್ಪನ್ನಗಳನ್ನು ಬಳಕೆ ಮಾಡುವಂತೆ ಜನರಿಗೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. 
SCROLL FOR NEXT