ಚೆನ್ನೈ: ಸೆ.17 ರಂದು ಚೆನ್ನೈ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದವನ್ನು ವೀಕ್ಷಿಸಲು, ಅನಾರೋಗ್ಯಕ್ಕೀಡಾಗಿರುವ ಅಭಿಮಾನಿಗೆ ಕ್ರಿಕೆಟಿಗ ಆರ್ ಅಶ್ವಿನ್ ನೆರವು ನೀಡಿದ್ದಾರೆ.
ಪ್ರಸ್ತುತ ಯುಕೆಯಲ್ಲಿನ ವರ್ಸೆಸ್ಟರ್ಶೈರ್ ಗಾಗಿ ಕ್ರಿಕೆಟ್ ಆಡುತ್ತಿರುವ ಆರ್ ಅಶ್ವಿನ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 43 ವರ್ಷದ ಪಿ ವೆಂಕಟೇಶನ್ ಎಂಬ ವ್ಯಕ್ತಿಗೆ ಅಶ್ವಿನ್ ಫೌಂಡೇಶನ್ ಮೂಲಕ ಕ್ರಿಕೆಟ್ ವೀಕ್ಷಿಸಲು ಹಾಸ್ಪೆಟಾಲಿಟಿ ಬಾಕ್ಸ್ ಟಿಕೆಟ್ ವ್ಯವಸ್ಥೆ ಮಾಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.
ವೆಂಕಟೇಶನ್ ಗೆ ನವೆಂಬರ್ ನಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದ್ದು ಅವರ ತಂಗಿ ಕಿಡ್ನಿ ನೀಡುತ್ತಿದ್ದಾರೆ. ಈ ವರೆಗೂ ನಾನು ಗ್ಯಾಲರಿಯಲ್ಲಿ ಕ್ರಿಕೆಟ್ ವೀಕ್ಷಿಸಿದ್ದೆ. ಈ ಬಾರಿ ಹಾಸ್ಪೆಟಾಲಿಟಿ ಬಾಕ್ಸ್ ಮೂಲಕ ಕ್ರಿಕೆಟ್ ವೀಕ್ಷಿಸಲು ಸಾಧ್ಯವಾಯಿತು ಅಶ್ವಿನ್ ಅವರ ಸಹಾಯಕ್ಕೆ ಧನ್ಯವಾದ ಎಂದು ವೆಂಕಟೇಶನ್ ಹೇಳಿದ್ದಾರೆ.