ಮಿಥಾಲಿ ರಾಜ್ 
ಕ್ರಿಕೆಟ್

ಬಿಬಿಸಿಯ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಮಿಥಾಲಿ ರಾಜ್

ಪ್ರಭಾವಿ ಸುದ್ದಿ ಮಾಧ್ಯಮ ಬಿಬಿಸಿ 2017ನೇ ಸಾಲಿನ ಜಗತ್ತಿನ ಅತ್ಯಂತ ಪ್ರಭಾವಿ 100 ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು,....

ನವದೆಹಲಿ: ಪ್ರಭಾವಿ ಸುದ್ದಿ ಮಾಧ್ಯಮ ಬಿಬಿಸಿ 2017ನೇ ಸಾಲಿನ ಜಗತ್ತಿನ ಅತ್ಯಂತ ಪ್ರಭಾವಿ 100 ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಸ್ಥಾನ ಪಡೆದಿದ್ದಾರೆ.
ಕಳೆದ ಐದು ವರ್ಷಗಳಿಂದ ಬಿಬಿಸಿ ಜಗತ್ತಿನ ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಹಲವು ಉದ್ಯಮಿಗಳು, ಎಂಜಿನಿಯರ್ ಗಳು, ಕ್ರೀಡಾಪಟುಗಳು, ಕಲಾವಿದರು, ಫ್ಯಾಷನ್ ಲೋಕದ ಸಾಧಕರು ಇರುವ 100 ಪಟ್ಟಿಯಲ್ಲಿ ಮಿಥಾಲಿ ರಾಜ್, ದೆಹಲಿಯ ಇರಾ ತ್ರಿವೇದಿ, ತುಲಿಕಾ ಕಿರಣ್ ಮತ್ತು ಬೆಂಗಳೂರಿನ ಅದಿತಿ ಅವಸ್ಥಿ ಅವರು ಸ್ಥಾನ ಪಡೆದಿದ್ದಾರೆ.
ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆ ಮಾಡಿರುವ ಮಿಥಾಲಿ ರಾಜ್ ಅವರು ನಾಯಕತ್ವ ಸ್ಥಾನದ ಜತೆಗೆ ಭಾರತ ತಂಡದ ಪ್ರದರ್ಶನವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಖ್ಯಾತಿ ಇವರದು. 
ಇರಾ ಅವರು ಲೇಖಕಿ, ಯೋಗ ಶಿಕ್ಷಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಇನ್ನು ಬೆಂಗಳೂರಿನ ಅದಿತಿ ಅವರು ಎಂಬಿಬೆ ಎಂಬ ಖಾಸಗಿ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಚ್ಚು: ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್‌; ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶ!

ರಾತ್ರೋರಾತ್ರಿ ನೈಟಿಯಲ್ಲೇ ಬಸ್ ಕಂಡಕ್ಟರ್ ಜೊತೆ ಓಡಿ ಹೋದ ನಟ, YouTuber ಅಖಿಲ್ NRD ಪತ್ನಿ; Video ವೈರಲ್!

ಬೆಂಗಳೂರಿನಲ್ಲಿ ಭೀಕರ ದುರಂತ: ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವು! Video

'ವಿಜಯ್ 'ಆಪ್ತೆ' ತ್ರಿಶಾರನ್ನು DCM ಆಗಿ ನೇಮಿಸುವುದು ಯಾವಾಗ?': ತಮಿಳುನಾಡು ಎದುರು ನೋಡುತ್ತಿದೆ ಎಂದ AIADMK ನಾಯಕ

ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆದರಿಕೆ ಆರೋಪ: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಅಭಿಷೇಕ್ ಪೊರೆಲ್ ಬಂಧನ!