ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 'ನಕಲಿ ಫೀಲ್ಡಿಂಗ್' ಗೆ ದಂಡ

Srinivasamurthy VN

ಬ್ರಿಸ್ಬೇನ್: ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಎಂಬಂತೆ ನಕಲಿ ಫೀಲ್ಡಿಂಗ್ ಕ್ರಿಕೆಟ್ ಆಸ್ಟ್ರೇಲಿಯಾದ ಆಟಗಾರ ಮೊದಲ ಬಾರಿಗೆ ದಂಡ ತೆತ್ತಿದ್ದಾನೆ.

ವಿಶ್ವ ಕ್ರಿಕೆಟ್ ನಲ್ಲಿ ಐಸಿಸಿಯ ನೂತನ ನಿಯಮಗಳು ಜಾರಿಯಾದ ಬಳಿಕ ಶಿಕ್ಷಾರ್ಹ ತಪ್ಪು ಮಾಡಿ ದಂಡನೆಗೆ ಒಳಗಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಕ್ವೀನ್ಸ್ ಲ್ಯಾಂಡ್  ಬುಲ್ಸ್ ತಂಡದ ಆಟಗಾರ ಫೀಲ್ಡರ್ ಮಾರ್ನಸ್  ಲ್ಯಾಬಸ್ಚಾಗ್ನೇ  ಒಳಗಾಗಿದ್ದಾರೆ. ಬ್ರಿಸ್ಬೇನ್ ನ ಆ್ಯಲನ್ ಬಾರ್ಡರ್ ಕ್ರಿಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ಮತ್ತು ಕ್ವೀನ್ಸ್‌ಲ್ಯಾಂಡ್ ಬುಲ್ಸ್ ತಂಡಗಳ ನಡುವೆ ಜೆಎಲ್‌ಟಿ ಒನ್-ಡೆ ಕಪ್ ಟೂರ್ನಿಯ ಪಂದ್ಯದಲ್ಲಿ  ಇಂತಹ ಘಟನೆ ನಡೆದಿದೆ.

ಕ್ರಿಕೆಟ್ ಆಸ್ಟ್ರೇಲಿಯ ತಂಡದ ಬ್ಯಾಟ್ಸ್‌ಮನ್ ಪಾರ್ಮ್ ಅಪ್ಪಾಲ್ ಬ್ಯಾಟಿಂಗ್ ಮಾಡುತ್ತಿದ್ದಾಗ 27ನೆ ಓವರ್‌ ನಲ್ಲಿ ಈ ಘಟನೆ ನಡೆದಿದ್ದು ಎದುರಾಳಿ ಕ್ವೀನ್ಸ್‌ಲ್ಯಾಂಡ್ ಬುಲ್ಸ್ ತಂಡದ ಮಾರ್ನಸ್ ಲ್ಯಾಬಸ್ಚಾಗ್ನೇ ಫೀಲ್ಡಿಂಗ್‌ ನಲ್ಲಿ  ಎಡವಿದರು. ಆದರೆ ಎದುರಾಳಿ ತಂಡದ ಬ್ಯಾಟ್ಸಮನ್ ಗಳನ್ನು ಗೊಂದಲಕ್ಕೀಡ ಮಾಡಲ ಕೂಡಲೇ ಅವರು ಬಾಲ್ ಹಿಡಿದಂತೆ ಹಾಗೂ ಎಸೆದಂತೆ ನಟಿಸಿದರು. ಈ ವಿಚಾರ ಬಹಿರಂಗವಾದ ಬಳಿಕ ಕೈ ಎತ್ತಿ ಕ್ಷಮೆ ಯಾಚಿಸಿದರು.

ಆಗ ಫೀಲ್ಡ್ ಅಂಪೈರ್‌ ಗಳಿಬ್ಬರು ಪರಸ್ಪರ ಮಾತುಕತೆ ನಡೆಸಿದ್ದು, ಅಂಪೈರ್ ಪಾಲ್ ವಿಲ್ಸನ್ ದಂಡ ವಿಧಿಸಿದ ಸಿಗ್ನಲ್ ನೀಡಿದರು. ಮೂಲಕ ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್ ಬಿಟ್ಟುಕೊಡಬೇಕಾಯಿತು. ಈ ಪಂದ್ಯದಲ್ಲಿ  ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಕ್ವೀನ್ಸ್‌ಲ್ಯಾಂಡ್ ಬುಲ್ಸ್ ವಿರುದ್ಧ 4 ವಿಕೆಟ್‌ ಗಳ ಜಯ ಗಳಿಸಿತು.

SCROLL FOR NEXT