ಡೆಲ್ಲಿ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿ, ಡಿಎಲ್ಎಸ್ ನಿಯಮ ಪ್ರಕಾರ ರಾಜಸ್ಥಾನಕ್ಕೆ 10 ರನ್ ಜಯ
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿಯಲ್ಲಿ ರಾಜಸ್ಥಾನ ರಾಯಲ್ಸ್ - ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯಕ್ಕೆಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಪಂದ್ಯ ನಡೆಯದ ಹಿನ್ನೆಲೆಯಲ್ಲಿ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 10 ರನ್‌ಗಳ ಅಂತರದಿಂಡ ಗೆಲುವು ಸಾಧಿಸಿದೆ ಎಂದು ಘೋಷಿಸಲಾಗಿದೆ.
ಈ ಮೂಲಕ ಪ್ರಸಕ್ತ ಐಪಿಎಲ್ ನಲ್ಲಿ ರಾಜಸ್ಥಾನ ತಂಡ ಮೊದಲ ಗೆಲುವು ಸಾಧಿಸಿದಂತಾಗಿದೆ. ಇದೇ ವೇಳೆ ಡೆಲ್ಲಿ ತಾನು ಆಡಿದ್ದ ಎರಡೂ ಪಂದ್ಯಗಳಲ್ಲಿ ಸೋಲು ಕಂದಿದೆ.
ಮಳೆಯಿಂದಾಗಿ ಆಟ ನಿಂತಾಗ ರಾಜಸ್ಥಾನ 17.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು.
ಇದರಿಂದ ನಿಯಮಾನುಸಾರ ಅಂತಿಮ ಗುರಿಯನ್ನು ಮತ್ತೆ ನಿಗದಿ ಮಾಡಲಾಗಿತ್ತು. ಅದರಂತೆ ಡೆಲ್ಲಿ 6 ಓವರ್‌ಗಳಲ್ಲಿ 71 ರನ್ ಗಳಿಸಬೇಕಿತ್ತು. ಆದರೆ ಡೆಲ್ಲಿ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿಲಷ್ಟೇ ಸಾಧ್ಯವಾಯಿತು. ಈ ಮೂಲಕ ರಾಜಸ್ಥಾನ 10 ರನ್ ಗಳಿಂದ ಗೆಲುವು ಸಾಧಿಸಿದೆ.
ರಾಜಸ್ಥಾನ ರಾಯಲ್ಸ್ 153/5 (17.5 ಓವರ್)
ಡೆಲ್ಲಿ ಡೇರ್ ಡೆವಿಲ್ಸ್ 60/4 (6.0 ಓವರ್)