ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಗರಿಷ್ಠ ರನ್ ಬಾರಿಸಿದ್ದರು ಆರೆಂಜ್ ಕ್ಯಾಪ್ ಧರಿಸಲ್ಲ ಎಂದು ಹೇಳಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 46 ರನ್ ಗಳಿಂದ ಸೋಲು ಕಂಡಿತ್ತು. ತಂಡ ಸತತ ಸೋಲುಗಳಿಂದ ಕಂಗೆಟ್ಟಿರುವುದಕ್ಕೆ ವಿರಾಟ್ ಕೊಹ್ಲಿ ಆತಂಕಕ್ಕೊಳಗಾಗಿದ್ದಾರೆ.
ಐಪಿಎಲ್ ನಲ್ಲಿ ಗರಿಷ್ಠ ರನ್ ಬಾರಿಸಿದ್ದರು ಆರೆಂಜ್ ಕ್ಯಾಪ್ ಧರಿಸಲು ನನಗೆ ಮನಸ್ಸಿಲ್ಲ. ಕೈಯಲ್ಲಿದ್ದ ಪಂದ್ಯವನ್ನು ನಾವು ಕೈಚೆಲ್ಲಿದೆವು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಒಂದೆರೆಡು ಉತ್ತಮ ಜತೆಯಾಟ ಮೂಡಿಬಂದಿದ್ದರೆ ಗೆಲುವು ಸಾಧ್ಯವಿತ್ತು. ನಮ್ಮ ತಪ್ಪುಗಳ ವಿಮರ್ಶೆಯಾಗಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.