ಕ್ರಿಕೆಟ್

ಮೊದಲ ಟೆಸ್ಟ್: ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ ಅಶ್ವಿನ್, ಇಂಗ್ಲೆಂಡ್ 285/9

Lingaraj Badiger
ಬರ್ಮಿಂಗ್‌ ಹ್ಯಾಮ್‌: ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರು ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ್ದಾರೆ. 
ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಪ್ರವಾಸಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ನಾಯಕ ಜೋ ರೂಟ್(80) ಹಾಗೂ ಜಾನಿ ಬೌರ್‌ಸ್ಟೋವ್ (70) ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಮೊದಲ ದಿನದಂತ್ಯಕ್ಕೆ 88 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ.
ಆಫ್ ಸ್ಪಿನ್ನರ್ ಅಶ್ವಿನ್ ಅವರು ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಆಲಿಸ್ಟಾರ್ ಕುಕ್(13) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆಂಗ್ಲರಿಗೆ ಮೊದಲ ಆಘಾತ ನೀಡಿದರು. 
ಈ ಹಂತದಲ್ಲಿ ನಾಯಕ ಜೋ ರೂಟ್ ಜತೆಗೂಡಿದ ಮಗದೋರ್ವ ಆರಂಭಿಕ ಕೇಟನ್‌ ಜೆನಿಂಗ್ಸ್‌ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಉತ್ತಮ ಜತೆಯಾಟವನ್ನು ಪ್ರದರ್ಶಿಸಿದರು.
ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಪ್ರಾರಂಭವಾಗಿದ್ದು, ಶುಭಾರಂಭ ಮಾಡಲು ಭಾರತ ಉತ್ಸುಕವಾಗಿ ಕಾಯುತ್ತಿದೆ.  2007 ರಿಂದ  ಈ ವರೆಗೂ ಇಂಗ್ಲೆಂಡ್ ನಲ್ಲಿ ಒಂದೇ ಒಂದೂ ಟೆಸ್ಟ್ ಸರಣಿಯನ್ನೂ ಗೆಲ್ಲದ ಭಾರತಕ್ಕೆ ಇದು ಪ್ರತಿಷ್ಠೆಯ ಪಂದ್ಯವಾಗಿದ್ದು, ರಾಹುಲ್ ದ್ರಾವಿಡ್ ನಂತರ ಕೊಹ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದ್ದಾರೆ. 
SCROLL FOR NEXT