'ಭಾರತ್ ಆರ್ಮಿ' ಕ್ರಿಕೆಟಿಗರಿಗೆ ಆಟೋದಲ್ಲಿ ಪಾನೀಯ ಸರಬರಾಜು ಮಾಡಿದ್ದೇಕೆ!
ಇಂಗ್ಲೆಂಡ್ ನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಆಟೋದಲ್ಲಿ ತಂಪು ಪಾನೀಯವನ್ನು ಮೈದಾನಕ್ಕೆ ಕೊಂಡೊಯ್ದ ಪ್ರಸಂಗ ನಡೆದಿದೆ...
ಲಂಡನ್: ಇಂಗ್ಲೆಂಡ್ ನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಆಟೋದಲ್ಲಿ ತಂಪು ಪಾನೀಯವನ್ನು ಮೈದಾನಕ್ಕೆ ಕೊಂಡೊಯ್ದ ಪ್ರಸಂಗ ನಡೆದಿದೆ.
ಇಂಗ್ಲೆಂಡ್ ನಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೇರಿ ರಚಿಸಿಕೊಂಡಿರುವ ಭಾರತ್ ಆರ್ಮಿ ಎನ್ನುವ ಗುಂಪು ಆಟೋದಲ್ಲಿ ತಂಪು ಪಾನೀಯ ಸರಬರಾಜು ಮಾಡಿ ಗಮನ ಸೆಳೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ್ ಆರ್ಮಿ ತಮ್ಮ ಟ್ವೀಟರ್ ಖಾತೆಯಲ್ಲೂ ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೂ ಆಟೋ ಬಳಸುವಂತೆ ಸಲಹೆ ನೀಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.