ರೇಡಿಯೋ ಸೆಟ್ ಮಾರುತ್ತಿರುವ ಅರ್ಜುನ್ 
ಕ್ರಿಕೆಟ್

ಕ್ರಿಕೆಟ್ ಬಿಟ್ಟು ಲಾರ್ಡ್ಸ್ ಮೈದಾನದಲ್ಲಿ ರೇಡಿಯೋ ಮಾರಾಟಕ್ಕಿಳಿದ ಅರ್ಜುನ್ ತೆಂಡೂಲ್ಕರ್!

ಭಾರತ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನದಲ್ಲಿ ರೇಡಿಯಾ ಮಾರುತ್ತಿದ್ದಾರೆ, ಅಲ್ಲದೆ ಇದಕ್ಕೆ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ.

ಲಂಡನ್: ಭಾರತ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನದಲ್ಲಿ ರೇಡಿಯಾ ಮಾರುತ್ತಿದ್ದಾರೆ, ಅಲ್ಲದೆ ಇದಕ್ಕೆ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಈ ವೇಳೆ ಮೈದಾನದಲ್ಲಿದ್ದ ನೀರನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗಳಿಗೆ ಸಹಾಯ ಮಾಡಿ ಅರ್ಜುನ್ ಸುದ್ದಿಗೆ ಗ್ರಾಸವಾಗಿದ್ದರು.  ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ದಂತಕಥೆಯ ಪುತ್ರನಾಗಿದ್ದರೂ ಸಿಬ್ಬಂದಿಗೆ ನೆರವು ನೀಡುವ ಮೂಲಕ ಲಾರ್ಡ್ಸ್ ಆಡಳಿತ ಮಂಡಳಿಯಿಂದಲೂ ಶ್ಲಾಘನೆಗೆ ಪಾತ್ರರಾಗಿದ್ದರು. ಇದೀಗ ಲಾರ್ಡ್ಸ್ ಮೈದಾನದ ಆವರಣದಲ್ಲಿ ಡಿಜಿಟಲ್ ರೇಡಿಯೋ ಸೆಟ್ ಗಳನ್ನು ಮಾರಾಟ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. 
ಇನ್ನೂ ಅಚ್ಚರಿಯ ವಿಚಾರವೆಂದರೆ ಅರ್ಜುನ್ ತೆಂಡೂಲ್ಕರ್ ಗೆ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ರೇಡಿಯೋ ಸೆಟ್ ಮಾರುತ್ತಿರುವ ಕುರಿತು ಭಜ್ಜಿ ಫೋಟೋ ಟ್ವೀಟ್ ಮಾಡಿ ಗುಡ್ ಬಾಯ್ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅರ್ಜುನ್ ರೇಡಿಯೋ ಸೆಟ್ ಮಾರಿದ್ದೇಕೆ?
ಮಳೆಯಿಂದಾಗಿ ಲಾರ್ಡ್ಸ್ ನಲ್ಲಿ ಎರಡನೇ ದಿನದಾಟ ಸ್ಥಗಿತವಾಗಿದ್ದ ವೇಳೆ ಅರ್ಜುನ್ ತೆಂಡೂಲ್ಕರ್ ಲಾರ್ಡ್ಸ್ ಅವರಣದಲ್ಲಿ ರೇಡಿಯೋ ಸೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಳಿ ಬಂದಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಭಜ್ಜಿ ಆ ರೇಡಿಯೋ ಸೆಟ್ ಗಳನ್ನು ಅರ್ಜುನ್ ಕೊರಳಿಗೆ ಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಫ್ಯಾನ್ಸ್ ಗೆ ಸಿಹಿಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜನೆಗೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್!

T20 ವಿಶ್ವಕಪ್ 2026: ಇತಿಹಾಸ ಬರೆದ ಭಾರತ.. ಅತೀ ದೊಡ್ಡ ಜಯ, ಜಗತ್ತಿನ ಯಾವ ತಂಡವೂ ಮಾಡದ ದಾಖಲೆ!

T20 ವಿಶ್ವಕಪ್ 2026: ಗುರು ದೇವೋ ಭವ.. ಮಾಜಿ ಕೋಚ್ Gary Kirsten ಬಿಗಿದಪ್ಪಿದ ಹಾರ್ದಿಕ್ ಪಾಂಡ್ಯಾ!

ಮಹಾಶಿವರಾತ್ರಿ: ಬೆಂಗಳೂರಿನಲ್ಲಿ ಫೆಬ್ರವರಿ 15 ರಂದು ಮಾಂಸ ಮಾರಾಟ, ವಧೆ ನಿಷೇಧ

T20 ವಿಶ್ವಕಪ್ 2026: ಭಾರತ ಭರ್ಜರಿ ಬೌಲಿಂಗ್, ನಮೀಬಿಯಾ ವಿರುದ್ಧ 93 ರನ್ ಜಯ

SCROLL FOR NEXT