ಬೂಮ್ರಾ ಮ್ಯಾಜಿಕ್: 9 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್; ಗೆಲುವಿನ ತುದಿಯಲ್ಲಿ ಭಾರತ 
ಕ್ರಿಕೆಟ್

ಬೂಮ್ರಾ ಮ್ಯಾಜಿಕ್: 9 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್; ಗೆಲುವಿನ ತುದಿಯಲ್ಲಿ ಭಾರತ

ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರಿತ್ ಬೂಮ್ರಾ ಇಂಗ್ಲೆಂಡ್ ಆಟಗಾರ ವೇಗಕ್ಕೆ ನಿಯಂತ್ರಣ ಹಾಕಿದ್ದು 3 ನೇ ಟೆಸ್ಟ್ ನಲ್ಲಿ ಭಾರತದ ಗೆಲುವಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ.

ನಾಟಿಂಗ್ ಹ್ಯಾಮ್: ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರಿತ್ ಬೂಮ್ರಾ ಇಂಗ್ಲೆಂಡ್ ಆಟಗಾರ ವೇಗಕ್ಕೆ ನಿಯಂತ್ರಣ ಹಾಕಿದ್ದು 3 ನೇ ಟೆಸ್ಟ್ ನಲ್ಲಿ ಭಾರತದ ಗೆಲುವಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ. 
ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 3 ನೇ ಟೆಸ್ಟ್ ನ  4 ನೇ ದಿನದ ಆಟ ಅತ್ಯಂತ ರೋಚಕವಾಗಿತ್ತು. ದಿನಾಂತ್ಯಕ್ಕೆ 9 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ತಂಡ 311 ರನ್ ಗಳಿಸಿದ್ದು ಗೆಲ್ಲಲು 210 ರನ್ ಗಳ ಅಗತ್ಯವಿದೆ.  
ಅಂತಿಮ ಇನ್ನಿಂಗ್ಸ್ ನಲ್ಲಿ ಭಾರತದ 521 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಾಲ್ಕನೇ ದಿನದ ಆಟದಲ್ಲಿ ಪ್ರಾರಂಭಿಕ ಹಿನ್ನೆಡೆ ಎದುರಿಸಿತಾದರೂ ಜೋಸ್ ಬಟ್ಲರ್ ಅವರ ಅದ್ಭುತ ಶತಕ ಹಾಗೂ ಬೆನ್ ಸ್ಟೋಕ್ಸ್ ಅವರ ಅರ್ಧಶತಕದ ನೆರವಿನಿಂದ ಭಾರತಕ್ಕೆ ದಿಟ್ಟ ಪ್ರತ್ಯುತ್ತರ ನೀಡಲು ಯತ್ನಿಸಿತು. 
ಆದರೆ ಇಂಗ್ಲೆಂಡ್ ನ ಆತ್ಮವಿಶ್ವಾಸಕ್ಕೆ ತಣ್ಣೀರೆರೆಚಿದ ಜಸ್ಪ್ರಿತ್ ಬೂಮ್ರಾ, 85 ರನ್ ಗಳನ್ನು ನೀಡಿ 5 ವಿಕೆಟ್ ಅತ್ಯುತ್ತಮ ಬೌಲರ್ ಎನಿಸಿದರು.  ಉಳಿದಂತೆ ಇಶಾಂತ್ ಶರ್ಮಾ 2 ವಿಕೆಟ್ , ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಗಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಏರ್ಪೋರ್ಟ್ to ಸೆಮಿಕಂಡಕ್ಟರ್‌, ಆಂಧ್ರಕ್ಕೆ ಬಂಪರ್ ಗಿಫ್ಟ್: ವಿಮಾನ ನಿಲ್ದಾಣ ಉದ್ಘಾಟನೆ ಸೇರಿ 17,900 ಕೋಟಿ ರೂ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ-Video

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

My friend, ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳಿ: ಪ್ರಧಾನಿ ಮೋದಿಯ ಹೊಸ ವಿಡಿಯೋ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿ! Video

'ದೇಶವನ್ನೇ ಕ್ಷಮಿಸಿದ ನರೇಂದ್ರ ಮೋದಿ: ಪ್ರಧಾನಿಯ ಹೊಸ ವಿಡಿಯೋ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ!