ಕ್ರಿಕೆಟ್

'ಮಾಸ್ಟರ್ ಬ್ಯಾಟ್ಸ್‌ಮನ್' ಕೊಹ್ಲಿಯನ್ನು ನೋಡಿ ಕಲಿತ್ತಿದ್ದೇನೆ: ಪಾಕ್ ಕ್ರಿಕೆಟಿಗ ಫಖರ್

Vishwanath S
ನವದೆಹಲಿ: ಟೀಂ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ವಿಶ್ವದ ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿ ಆಟ ನೋಡಿ ಸಾಕಷ್ಟು ಕಲಿತಿದ್ದೇನೆ ಎಂದು ಪಾಕಿಸ್ತಾನದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಫಖರ್ ಜಮಾನ್ ಹೇಳಿದ್ದಾರೆ. 
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಕೊಹ್ಲಿಯನ್ನು ಫಖರ್ ಕೊಂಡಾಡಿದ್ದಾರೆ. ವಿರಾಟ್ ವಿಶ್ವ ಶ್ರೇಷ್ಠ ಆಟಗಾರ ಎನ್ನುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದ್ದಾರೆ. 
ವಿರಾಟ್ ಕೊಹ್ಲಿ ಅವರ ಪರಿಶ್ರಮ ಹಾಗೂ ಬ್ಯಾಟಿಂಗ್ ಶೈಲಿ ನನ್ನಂತಹ ಅನೇಕರಿಗೆ ಸ್ಫೂರ್ತಿಯಾಗಿದೆ. ಕೊಹ್ಲಿಯನ್ನು ನೋಡಿ ಸಾಕಷ್ಟು ಕಲಿತಿದ್ದೇನೆ. ಅವರ ಆಟ ನೋಡುವುದೇ ಖುಷಿಯ ವಿಚಾರ ಎಂದು ಫಖರ್ ಹೇಳಿದ್ದಾರೆ.
SCROLL FOR NEXT