ಸಿಡ್ನಿ: ಮಸಾಜ್ ಥೆರಪಿಸ್ಟ್ ಮಾಡಿದ್ದ ಆರೋಪವನ್ನು ಆಧರಿಸಿ ಸುದ್ದಿ ಬಿತ್ತರಿಸಿದ್ದ ಸುದ್ದಿ ವಾಹಿನಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಜಯ ಸಾಧಿಸಿದ್ದು, ಸಂಸ್ಥೆಯಿಂದ ಭಾರಿ ಪ್ರಮಾಣದ ಮೊತ್ತವನ್ನು ದಂಡ ರೂಪದಲ್ಲಿ ಪಡೆಯಲಿದ್ದಾರೆ.
ಹೌದು.. ಈ ಹಿಂದೆ 2015ರ ವಿಶ್ವಕಪ್ ಟೂರ್ನಿ ವೇಳೆ ಕ್ರಿಸ್ ಗೇಲ್ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಗೇಲ್ ಟವಲ್ ಬಿಚ್ಚಿ ಮರ್ಮಾಂಗ ತೋರಿಸಿ ಲೈಂಗಿಕವಾಗಿ ಪ್ರಚೋದಿಸಿದ್ದರು ಎಂದು ಮಸಾಜ್ ಥೆರಪಿಸ್ಟ್ ಲಿಯಾನೆ ರಸಲ್ ಎನ್ನುವ ಮಹಿಳೆ ಗೇಲ್ ವಿರುದ್ಧ ದೂರು ದಾಖಲಿಸಿದ್ದರು. ಇದನ್ನ ಆಧರಿಸಿ ಫೇರ್ ಫ್ಯಾಕ್ಸ್ ಎನ್ನುವ ಸಂಸ್ಥೆ ಸುದ್ದಿ ಪ್ರಕಟಿಸಿತ್ತು. ಈ ಆರೋಪವನ್ನ ತಳ್ಳಿಹಾಕಿದ್ದ ಗೇಲ್, ಫೇರ್ ಫ್ಯಾಕ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ವೇಳೆ ನಡೆದ ವಿಚಾರಣೆಗಳಲ್ಲಿ ಫೇರ್ ಫಾಕ್ಸ್ ಸಂಸ್ಥೆ ಕೋರ್ಟ್ಗೆ ಸರಿಯಾದ ಸಾಕ್ಷ್ಯಧಾರಗಳು ಸಲ್ಲಿಸಲು ವಿಫಲವಾಗಿದ್ದರಿಂದ ಕೋರ್ಟ್ ಗೇಲ್ಗೆ ಕ್ಲೀನ್ ಚಿಟ್ ನೀಡಿದೆ. ಅಲ್ಲದೇ ಸುದ್ದಿ ಸಂಸ್ಥೆಗೆ ಬರೊಬ್ಬರಿ 2,20,770 ಅಮೇರಿಕನ್ ಡಾಲರ್ ದಂಡ ವಿಧಿಸಿದೆ. ಇದರಿಂದ ಫೇರ್ಫ್ಯಾಕ್ಸ್ ಗೇಲ್ಗೆ ಸುಮಾರು 1 ಕೋಟಿ 50 ಲಕ್ಷಕ್ಕೂ ಹೆಚ್ಚಿನ ಮೊತ್ತ ನೀಡಬೇಕಾಗಿ ಬಂದಿದೆ.