ವಿಕೆಟ್ ಪಡೆದ ಖುಷಿಯಲ್ಲಿ ಬುಮ್ರಾ 
ಕ್ರಿಕೆಟ್

ಭಾರತದ ಗೆಲುವಿಗೆ ಒಂದೇ ವಿಕೆಟ್ ಬಾಕಿ, ನಿರ್ಣಾಯಕ ಘಟ್ಟದಲ್ಲಿ ಮೊದಲ ಟೆಸ್ಟ್ ಪಂದ್ಯ

ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದು, ಪಂದ್ಯ ನಿರ್ಣಾಯಕ ಹಂತ ತಲುಪಿದೆ.

ಅಡಿಲೇಡ್: ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದು, ಪಂದ್ಯ ನಿರ್ಣಾಯಕ ಹಂತ ತಲುಪಿದೆ.
ನಿನ್ನೆ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದ್ದ ಕಾಂಗರೂಗಳು ಇಂದು ಬುಮ್ರಾ ವೇಗದ ದಾಳಿಗೆ ಸಿಲುಕಿ ಮತ್ತೆ 3 ವಿಕೆಟ್ ಕಳೆದುಕೊಂಡಿದ್ದಾರೆ. ಆ ಮೂಲಕ ಭಾರತದ ಗೆಲುವಿಗೆ ಇನ್ನೂ ಕೇವಲ 1 ವಿಕೆಟ್ ಮಾತ್ರ ಬೇಕಿದ್ದು, ಆಸ್ಟ್ರೇಲಿಯಾ ತಂಡದ ಗೆಲುವಿಗೆ ಇನ್ನೂ 53 ರನ್ ಗಳ ಅವಶ್ಯಕತೆ ಇದೆ. 
ಹಾಲಿ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಸೋಲಿನತ್ತ ಮುಖ ಮಾಡಿದ್ದು, ಭಾರತೀಯ ಬೌಲರ್ ಗಳು ಬಾಕಿ ಉಳಿದಿರುವ 1 ವಿಕೆಟ್ ಪಡೆದರೆ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಗೆಲುವು ತಂಡದಾಗುತ್ತದೆ. ನಿನ್ನೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದು ಕೊಂಡಿದ್ದ ಅಪಾಯಕಾರಿ ಬ್ಯಾಟ್ಸಮನ್ ಶಾನ್ ಮಾರ್ಷ್ ಇಂದು ಅರ್ಧಶತಕ ಸಿಡಿಸಿ ಭಾರತದ ಆತಂಕಕ್ಕೆ ಕಾರಣವಾಗಿದ್ದರು.  ಆದರೆ 60 ರನ್ ಗಳಿಸಿದ್ದ ಮಾರ್ಷ್ ಬುಮ್ರಾ ಬೌಲಿಂಗ್ ನಲ್ಲಿ ಅನಗತ್ಯವಾಗಿ ಚೆಂಡನ್ನು ಕೆಣಕಿ ರಿಷಬ್ ಪಂತ್ ಗೆ ಕ್ಯಾಚ್ ನೀಡಿ ಹೊರ ನಡೆದರು. 
ಬಳಿಕ ಬಂದ ಹ್ಯಾಂಡ್ಸ್ ಕಾಂಬ್ ಮತ್ತು ಟ್ರಾವಿಸ್ ಹೆಡ್ ತಲಾ 14 ರನ್ ಗಳಿಸಿ ಔಟ್ ಆದರೆ, ನಾಯಕ ಟಿಮ್ ಪೈನೆ 41 ರನ್ ಗಳಿಸಿ ಭಾರತದ ಗೆಲುವಿಗೆ ಅಡ್ಡಲಾಗಿ ನಿಂತರು. ಆದರೆ ಮತ್ತೆ ದಾಳಿಗಿಳಿದ ಜಸ್ ಪ್ರೀತ್ ಬುಮ್ರಾ ಆಸಿಸ್ ನಾಯಕನಿಗೆ ಪೆವಿಲಿಯನ್ ದಾರಿ ತೋರಿಸಿದರು.
ಪ್ರಸ್ತುತ ಆಸಿಸ್ ನ ಬಾಲಂಗೋಚಿ ಬ್ಯಾಟ್ಸಮನ್ ಗಳಾದ ಹೇಜಲ್ ವುಡ್ (3 ರನ್) ಮತ್ತು ನಾಥನ್ ಲಿಯಾನ್ (28 ರನ್) ಆಟವಾಡುತ್ತಿದ್ದು, ಭಾರತಕ್ಕೆ ಗೆಲ್ಲಲು 1 ವಿಕೆಟ್ ನ ಅವಶ್ಯಕತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ