ಅಡಿಲೇಡ್: ಪೂಜಾರ ಅಮೋಘ ಇನ್ನಿಂಗ್ಸ್ ನೆರವಿನಿಂದಾಗಿಯೇ ಮೊದಲ ಟೆಸ್ಟ್ ನಲ್ಲಿ ಗೆಲುವು ಸಾಧ್ಯವಾಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಬೌಲಿಂಗ್ ವಿಭಾಗ ಮತ್ತು ಚೇತೇಶ್ವರ ಪೂಜಾರ ಅವರಿಗೆ ಗೆಲುವಿನ ಕ್ರೆಡಿಟ್ ನೀಡಿದರು. ಈ ವೇಳೆ ಪೂಜಾರ ಅವರ ಅಮೋಘ ಬ್ಯಾಟಿಂಗ್ ನ ಗುಣಗಾನ ಮಾಡಿದ ಕೊಹ್ಲಿ, ಪೂಜಾರ ಅವರ ಇನ್ನಿಂಗ್ಸ್ ಬೆಲೆ ಕಟ್ಟಲಾಗದ್ದು. ಅವರ ಶತಕದ ನೆರವಿನಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ ಗೌರವಾನ್ವಿತ ಮೊತ್ತ ಪೇರಿಸುವಂತಾಯಿತು. ಅಂತೆಯೇ ಬೌಲರ್ ಗಳ ಸಾಂಘಿಕ ಪ್ರದರ್ಶನದಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ 15 ರನ್ ಗಳ ಮುನ್ನಡೆ ದೊರೆಯಿತು.
ಅಂತೆಯೇ ಎರಡನೇ ಇನ್ನಿಂಗ್ಸ್ ನಲ್ಲಿ ರಹಾನೆ ಉತ್ತಮವಾಗಿ ಆಡಿದರು. ಅಲ್ಲದೆ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ನಲ್ಲೂ ಪೂಜಾರ 71ರನ್ ಗಳ ಅತ್ಯುತ್ತಮ ಕಾಣಿಕೆ ನೀಡಿದರು. ಇದು ಎದುರಾಳಿ ಆಟಗಾರರ ಹೃದಯ ಬಡಿತ ಹೆಚ್ಚಾಗುವಂತೆ ಮಾಡಿತ್ತು. ಆದರೆ ನಮ್ಮ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಆಡಿದ್ದರೆ 30-35 ರನ್ ಗಳು ಬರುತ್ತಿತ್ತು. ಈ ವಿಭಾಗದಲ್ಲಿ ಪ್ರಯತ್ನಗಳು ಸಾಗಬೇಕಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಸುಧಾರಿಸಬೇಕಿದೆ ಎಂದು ಕೊಹ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics