ಅಶ್ವಿನ್ ಮತ್ತು ರೋಹಿತ್ ಶರ್ಮಾ
ಆಡಿಲೇಡ್: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಜಯ ಸಾಧಿಸಿದೆಯಾದರೂ, ಅಶ್ವಿನ್ ಮತ್ತು ರೋಹಿತ್ ಶರ್ಮಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಅಡಿಲೇಡ್ ಪಂದ್ಯ 2ನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಅದೇ ಸಂದರ್ಭದಲ್ಲೇ ವಿಕೆಟ್ ಪಡೆದ ಖುಷಿಯಲ್ಲಿ ರೋಹಿತ್ ಶರ್ಮಾ ಅಶ್ವಿನ್ ರನ್ನು ಅಭಿನಂದಿಸಲು ಬಂದರು. ಈ ವೇಳೆ ರೋಹಿತ್ ಶರ್ಮಾ ಹಸ್ತಲಾಘವಕ್ಕೆ ಮುಂದಾದರಾದರೂ, ಅಶ್ವಿನ್ ಹಾಗೆಯೇ ಮುನ್ನಡೆದರು. ಇದರಿಂದ ಕೊಂಚ ಕಸಿವಿಸಿಗೊಂಡ ರೋಹಿತ್ ಶರ್ಮಾ ಅಶ್ವಿನ್ ಬೆನ್ನು ತಟ್ಟಿ ಮುನ್ನಡೆದರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಉದ್ದೇಶಪೂರ್ವಕವಾಗಿ ರೋಹಿತ್ ಶರ್ಮಾರನ್ನು ಕಡೆಗಣಿಸಿದರು ಎಂದು ಹೇಳಿ ಟ್ರೋಲ್ ಮಾಡಲಾಗುತ್ತಿದೆ. ಆದರೆ ಸತ್ಯ ಸಂಗತಿ ಅದಲ್ಲ. ವಿಕೆಟ್ ಪಡದ ವೇಳೆ ಅಶ್ವಿನ್ ರನ್ನು ರೋಹಿತ್ ಶರ್ಮಾ ಅಭಿನಂದಿಸಲು ಬಂದಾಗ ಅಶ್ವಿನ್ ಮತ್ತೋರ್ವ ಆಟಗಾರನೊಂದಿಗೆ ಮಾತನಾಡುತ್ತಿದ್ದರು. ಅದರೆ ಅಶ್ವಿನ್ ಮಾತನಾಡುತ್ತಿದ್ದ ಆಟಗಾರ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಇದೇ ಸಂದರ್ಭದಲ್ಲೇ ರೋಹತ್ ಶರ್ಮಾ ಹಸ್ತಲಾಘವಕ್ಕೆ ಮುಂದಾಗಿದ್ದು, ಇದನ್ನು ಗಮನಿಸದ ಅಶ್ವಿನ್ ಹಾಗೆಯೇ ಮುಂದೆ ಸಾಗಿದ್ದಾರೆ. ಅಷ್ಟೇ ಹೊರತು ಅಶ್ವಿನ್ ರೋಹಿತ್ ಶರ್ಮಾರನ್ನು ಕಡೆಗಣಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics