ಲಂಡನ್: ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾವನ್ನು ಕಟ್ಟಿಹಾಕಲು ಆಸ್ಚ್ರೇಲಿಯಾ ತಂಡ ಹೂಡಿರುವ ಯೋಜನೆ ಅದಕ್ಕೇ ತಿರುಗುಬಾಣವಾಗುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ತಮ್ಮ ವೇಗಿಗಳಿಗೆ ನೆರವಾಗುವಂತೆ ಪಿಚ್ ಮೇಲೆ ಹಸಿರು ಹೊದಿಕೆ ಏರ್ಪಡಿಸಿಕೊಂಡಿದೆ. ಆದರೆ ಕಾಂಗರೂಗಳ ಈ ಯೋಜನೆ ಆ ತಂಡಕ್ಕೆ ತಿರುಗುಬಾಣವಾಗುವ ಸಾಧ್ಯತೆಗಳೇ ಹೆಚ್ಚಿದೆ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ತಮ್ಮ ವೇಗಿಗಳಿಗೆ ನೆರವಾಗಬೇಕು ಎಂದು ಭಾವಿಸಿರುವ ಕಾಂಗರೂಗಳೂ ಟೀಂ ಇಂಡಿಯಾದಲ್ಲೂ ವೇಗಿಗಳಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದು ವಾನ್ ವ್ಯಂಗ್ಯ ಮಾಡಿದ್ದಾರೆ.
ಅಲ್ಲದೆ ಟೀಂ ಇಂಡಿಯಾ ತ್ರಿವಳಿ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಜಸ್ ಪ್ರೀತ್ ಬುಮ್ರಾ ಗುಣಗಾನ ಮಾಡಿದ ವಾನ್, ಮೂವರೂ ವೇಗಿಗಳು ಫಾರ್ಮ್ ನಲ್ಲಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಹೀಗಿದ್ದೂ ಆಸ್ಟ್ರೇಲಿಯಾ ತಂಡ ಇಂತಹ ಬೌನ್ಸಿ ಟ್ರ್ಯಾಕ್ ನ ಮೊರೆ ಹೋಗಿರುವುದು ನನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮೈಕಲ್ ವಾನ್ ಅಭಿಪ್ರಾಯ ಇದೀಗ ನಿಜ ಕೂಡ ಆಗಿದ್ದು, 2ನೇ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ವೇಗಿಗಳು ಯಶಸ್ಸುಕಂಡಿದ್ದಾರೆ. ಪ್ರಮುಖವಾಗಿ ವೇಗಿ ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದ್ದು, ಬುಮ್ರಾ ಮತ್ತು ಶಮಿ ತಲಾ 2 ವಿಕೆಟ್ ಗಳಿಸಿದ್ದಾರೆ. ಅಂತೆಯೇ ಉದಯೋನ್ಮುಖ ಆಟಗಾರ ಹನುಮ ವಿಹಾರಿ ಕೂಡ 2 ವಿಕೆಟ್ ಪಡೆದು ಮಿಂಚಿರುವುದು ಆಸಿಸ್ ಯೋಜನೆಗಳು ಅವರಿಗೇ ತಿರುಗುಬಾಣವಾಗುತ್ತಿದೆ ಎಂಬುದನ್ನು ಸಾಬೀತು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics