ಕೊಹ್ಲಿ ತರಬೇತಿ ವಿಡಿಯೋ 
ಕ್ರಿಕೆಟ್

ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡಿದ ಕೊಹ್ಲಿ: ವಿಡಿಯೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡುವ ಮೂಲಕ ಕಾಂಗರೂಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಪರ್ತ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡುವ ಮೂಲಕ ಕಾಂಗರೂಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಹೌದು.. ಭಾರತ ತಂಡದ ಮೊದಲ ಇನ್ನಿಂಗ್ಸ್ ವೇಳೆ ಶತಕ ಸಿಡಿಸಿ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಕೊಹ್ಲಿ ವಿವಾದಾತ್ಮಕ ಕ್ಯಾಚ್ ಗೆ ಬಲಿಯಾಗಿದ್ದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಪೀಟರ್ ಹ್ಯಾಂಡ್ಸ್ ಕಾಂಬ್ ಹಿಡಿದಿದ್ದ ಕ್ಯಾಚ್ ವಿವಾದಕ್ಕೆ ಕಾರಣವಾಗಿತ್ತು. ಚೆಂಡು ಪೀಟರ್ ಹ್ಯಾಂಡ್ಸ್ ಕಾಂಬ್ ಕೈ ಸೇರುವ ಮುನ್ನ ನೆಲಕ್ಕೆ ತಾಗಿತ್ತು. ಹೀಗಾಗಿ ಇದು ಔಟ್ ಅಲ್ಲ ಎಂದು ಅಭಿಮಾನಿಗಳು ಕೂಗಿದ್ದರು. ಆದರೆ ಫೀಲ್ಡ್ ಅಂಪೈರ್ ಮಾತ್ರ ತತ್ ಕ್ಷಣವೇ ಔಟ್ ನೀಡಿದ್ದರು. ಅದು ಸಾಲದು ಎಂಬಂತೆ ಥರ್ಡ್ ಅಂಪೈರ್ ಕೂಡ ಇದನ್ನು ಔಟ್ ಎಂದು ತೀರ್ಪು ನೀಡಿದ್ದರು.
ಹೀಗಾಗಿ ಕೊಹ್ಲಿ ಬೇರೆ ಮಾರ್ಗವಿಲ್ಲದೇ ಅಸಮಾಧಾನದಿಂದಲೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು. ಇನ್ನು ಈ ವಿಚಾರ ದಿನದಾಟದ ಅಂತ್ಯದ ಬಳಿಕವೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕ್ಯಾಮೆರಾಗಳಲ್ಲಿ ಚೆಂಡು ಪೀಟರ್ ಹ್ಯಾಂಡ್ಸ್ ಕಾಂಬ್  ಕೈ ಸೇರುವ ಮುನ್ನ ನೆಲಕ್ಕೆ ತಾಗಿರುವಂತೆ ಕಂಡಿತ್ತು. 
ಇನ್ನು ಇದನ್ನ ಕೊಹ್ಲಿ ಇಂದು ಬೆಳಗ್ಗೆ ತರಬೇತಿ ವೇಳೆ ಅನುಕರಿಸುವ ಮೂಲಕ ಕಾಂಗರೂಗಳ ಕಿಚಾಯಿಸುವ ಕೆಲಸ ಮಾಡಿದರು.  ಪೀಟರ್ ಹ್ಯಾಂಡ್ಸ್ ಕಾಂಬ್ ಜಿಗಿದಂತೆಯೇ ತಾವೂ ಕೂಡ ಜಿಗಿದು ಔಟ್ ಎಂದು ಕೂಗುವ ಮೂಲಕ ತಮ್ಮ ವಿವಾದಾತ್ಮಕ ಕ್ಯಾಚ್ ಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!

Ramayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ