ಸಂಗ್ರಹ ಚಿತ್ರ 
ಕ್ರಿಕೆಟ್

ಮೊದಲ ಇನ್ನಿಂಗ್ಸ್ ನಲ್ಲಿ ಶತಕ, 2ನೇ ಇನ್ನಿಂಗ್ಸ್ ನಲ್ಲಿ ಡಕೌಟ್; ವಿಚಿತ್ರ ದಾಖಲೆ ಬರೆದ ಪೂಜಾರ!

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಯಾರಿಗೂ ಬೇಡವಾದ ಕಳಪೆ ದಾಖಲೆ ಪಟ್ಟಿ ಸೇರಿದ್ದಾರೆ.

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಯಾರಿಗೂ ಬೇಡವಾದ ಕಳಪೆ ದಾಖಲೆ ಪಟ್ಟಿ ಸೇರಿದ್ದಾರೆ.
ಹೌದು.. ಮೊದಲ ಇನ್ನಿಂಗ್ಸ್ ಭರ್ಜರಿ ಶತಕ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದ ಪೂಜಾರ ಅದೇ ರೀತಿಯ ಎರಡನೇ ಇನ್ನಿಂಗ್ಸ್ ನಲ್ಲಿ ಶೂನ್ಯ ಸಾಧನೆ ಮಾಡಿ ಕ್ರಿಕೆಟಿಗರು ಬೇಡ ಎನ್ನುವ ಕಳಪೆ ದಾಖಲೆ ಪಟ್ಟಿಯೊಂದನ್ನು ಸೇರಿದ್ದಾರೆ. 
ದ್ರಾವಿಡ್ ಬಳಿಕ ಟೀಂ ಇಂಡಿಯಾದ ಟೆಸ್ಟ್ ನ ಗೋಡೆ ಎಂದು ಖ್ಯಾತಿ ಪಡೆದಿರುವ ಚೇತೇಶ್ವರ ಪೂಜಾರ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭರ್ಜರಿ ಶತಕ(106)ರನ್​ಗಳಿಕೆ ಮಾಡಿ ಅನೇಕ ಕ್ರಿಕೆಟ್​ ದಿಗ್ಗಜರ ದಾಖಲೆ ಸರಿಗಟ್ಟಿದ್ದರು. ಅದೇ ರೀತಿ 2ನೇ ಇನ್ನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ಕಳಪೆ ರೆಕಾರ್ಡ್​ ಪಟ್ಟಿ ಸೇರಿದ್ದಾರೆ.
ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಹೀರೋ ಆಗಿದ್ದ ಪೂಜಾರ 2ನೇ ಇನ್ನಿಂಗ್ಸ್​​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸುವ ಮೂಲಕ ಕ್ರಿಕೆಟ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್​, ಡಾನ್​ ಬ್ರಾಡ್ಮನ್​ ಹಾಗೂ ವೆಸ್ಟ್​ ಇಂಡೀಸ್​ನ ಕ್ರಿಕೆಟ್​ ದೈತ್ಯ ವಿವಿ ರಿಚರ್ಡ್ಸ್, ಸರ್​ ಗಾರ್ಫಿಲ್ಡ್​, ಜಾಕ್​ ಕಾಲಿಸ್​ ಹಾಗೂ ವಿಂಡೀಸ್ ನ ಶಿವನಾರಾಯಣ್​ ಚಂದ್ರಪಾಲ್​  ಅವರ ಕಳಪೆ ರೆಕಾರ್ಡ್​ ಪಟ್ಟಿಗೆ ಸೇರಿದ್ದಾರೆ.
ಈ ಮೇಲಿನ ಎಲ್ಲ ಆಟಗಾರರು ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಶತಕ ಸಿಡಿಸಿ, 2ನೇ ಇನ್ನಿಂಗ್ಸ್​​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಅದೇ ರೀತಿ ಪೂಜಾರ ಕೂಡ ಮೆಲ್ಬೋರ್ನ್​ ಟೆಸ್ಟ್​ ಪಂದ್ಯದಲ್ಲಿ ಮಾಡಿದ್ದಾರೆ. ಇನ್ನು 2015ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಇನ್ನಿಂಗ್ಸ್​​ನಲ್ಲಿ 145ರನ್​ಗಳಿಕೆ ಮಾಡಿದ್ದ ಪೂಜಾರ 2ನೇ ಇನ್ನಿಂಗ್ಸ್​​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಇದೀಗ 2ನೇ ಸಲ ಅದೇ ರೀತಿ ವಿಕೆಟ್​ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video