ರಿಷಬ್ ಪಂತ್-ಟೀಮ್ ಪೈನ್ 
ಕ್ರಿಕೆಟ್

ಮಗು ನೋಡ್ಕೊ ಎಂದ ಟಿಮ್ ಪೈನ್‌ಗೆ ಟಾಂಗ್ ಕೊಟ್ಟ ರಿಷಬ್ ಪಂತ್, ವಿಡಿಯೋ ವೈರಲ್!

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಉಭಯ...

ಮೆಲ್ಬರ್ನ್: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಉಭಯ ತಂಡದ ಆಟಗಾರರು ಇದೀಗ ಎದುರಾಳಿ ತಂಡಗಳ ಆಟಗಾರರ ಮೇಲೆ ಸ್ಲೆಡ್ಜಿಂಗ್ ಮಾಡುತ್ತಿರುವುದು ಅತಿರೇಕಕ್ಕೆ ಹೋಗುತ್ತಿದೆ.
ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಕೀಪರ್ ರಿಷಬ್ ಪಂತ್ ಹಾಗೂ ಆಸ್ಟ್ರೇಲಿಯಾದ ತಾತ್ಕಾಲಿಕ ನಾಯಕ ಟಿಮ್ ಪೈನ್ ನಡುವಿನ ಸ್ಲೆಡ್ಜಿಂಗ್ ಮಾಡುತ್ತಿದ್ದಾರೆ. ಮೂರನೇ ದಿನದಾಟದಂದು ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಟಿಮ್ ಪೈನ್, ನಾನು ನನ್ನ ಹೆಂಡತಿಯ ಜೊತೆ ಸಿನಿಮಾ ನೋಡಲು ಹೋಗುತ್ತೇನೆ. ನೀನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯ? ಎಂದು ಕಾಲೆಳೆದಿದ್ದರು.
ಇದಕ್ಕೆ ನಾಲ್ಕನೇ ದಿನದಾಟದಲ್ಲಿ ರಿಷಬ್ ಪಂತ್ ಮುಯ್ಯಿ ತೀರಿಸಿಕೊಂಡಿದ್ದಾರೆ. ಹೌದು ಟಿಮ್ ಪೈನ್ ಬ್ಯಾಟಿಂಗ್ ಮಾಡುತ್ತಿದ್ದಾಗ ರಿಷಬ್ ಪಂತ್ ಪೈನ್ ಗೆ ತಾತ್ಕಾಲಿಕ ನಾಯಕ ಎಂದು ಕಾಲೆಳೆದಿದ್ದಾರೆ. ಇನ್ನು ಸೋಲಿನ ದವಡೆಯಲ್ಲಿದ್ದ ಆಸ್ಟ್ರೇಲಿಯಾಕ್ಕಾಗಿ ಪೈನ್ ನಿಧಾನ ಗತಿಯ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ರಿಷಬ್ ಪಂತ್ ಟಿಮ್ ಪೈನ್ ಕಾಲೆಳೆದಿದ್ದಾರೆ.
ಇನ್ನು ಪಂತ್ ಟಿಮ್ ಪೈನ್ ರ ಕಾಳೆಯುತ್ತಿದ್ದಾಗ ಸ್ವತ ವೀಕ್ಷಕ ವಿವರಣೆಗಾರರು ಸಹ ಸುಮ್ಮನಿದ್ದು ಇವರ ಸಂಭಾಷಣೆಗಳನ್ನು ಕೇಳಿಸಿಕೊಳ್ಳುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!

Ramayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ