ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆಯುವ ಮೂಲಕ ಎಬಿಡಿ ಹಾಗೂ ಇಂಗ್ಲೆಂಡ್ನ ಜಾಕ್ ರಸೆಲ್ ಅವರ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಮಗದೊಂದು ದಾಖಲೆ ನಿರ್ಮಿಸಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಾಟದ ಅಂತ್ಯದ ವೇಳೆಗೆ ಪಂತ್ ಟೆಸ್ಟ್ ಕ್ರಿಕೆಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಮತ್ತು ಸ್ಟಂಪ್ (Dismissal) ಮಾಡಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಸರಣಿಯಲ್ಲಿ ಒಟ್ಟು 20 ವಿಕೆಟ್ ಪತನ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ.
ಅಂತೆಯೇ ಪದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಗಳಲ್ಲಿ ಭಾಗಿಯಾಗುವ ಮೂಲಕ ಪದಾರ್ಪಣೆ ವರ್ಷದಲ್ಲೇ ಗರಿಷ್ಠ ವಿಕೆಟ್ ಸಾಧನೆಗೈದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಂತ್ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಪಂತ್ ಆಸ್ಟ್ರೇಲಿಯಾದ ಬ್ರಾಡ್ ಹಡ್ಡಿನ್ ದಾಖಲೆಯನ್ನು ಸರಿಗಟ್ಟಿದ್ದು, 2008ರಲ್ಲಿ ಪದಾರ್ಪಣೆ ಮಾಡಿದ್ದ ಹಡ್ಡಿನ್ 42 ವಿಕೆಟ್ ಗಳಲ್ಲಿ ಪಾಲ್ಗೊಳ್ಳುವ ಮೂಲಕ ಗರಿಷ್ಠ ಸಾಧನೆ ಗೈದಿದ್ದರು. ಇದೀಗ ಪಂತ್ ಕೂಡ ಅಷ್ಟೇ ಪ್ರಮಾಣದಲ್ಲಿ ವಿಕೆಟ್ ಗಳ ಪಡೆದ ಸಾಧನೆಗೈದಿದ್ದಾರೆ.
ಇನ್ನು ಪಟ್ಟಿಯಲ್ಲಿ ಮತ್ತೋರ್ವ ಆಸಿಸ್ ಆಟಗಾರ ಪೀಟರ್ ನೆವಿಲ್ 2ನೇ ಸ್ಥಾನದಲ್ಲಿದ್ದು, ಇವರು 36 ವಿಕೆಟ್ ಪಡೆದಿದ್ದರು. ಇನ್ನು 1979/80ರಲ್ಲಿ ಸೈಯದ್ ಕಿರ್ಮಾನಿ ಹಾಗೂ 1954/55ರಲ್ಲಿ ನರೆನ್ ತಹ್ಮೇನ್ 19 ಡಿಸ್ಮಿಸಲ್‌ನಲ್ಲಿ ಭಾಗಿಯಾಗಿದ್ದರು. ಈ ಪೈಕಿ ಪಂತ್ ಕೇವಲ 3 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ 2006ರ ವೆಸ್ಟ್‌ಇಂಡೀಸ್ ಹಾಗೂ 2014ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 17 ಡಿಸ್ಮಿಸಲ್‌ನಲ್ಲಿ ಭಾಗಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics