ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಆಸಿಸ್ ನೆಲದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಗೈದಿದೆ. ಅಂತೆಯೇ ನಾಯಕ ವಿರಾಟ್ ಕೊಹ್ಲಿಯ ಟಾಸ್ ಗೆದ್ದ ಪಂದ್ಯಗಳಲ್ಲಿ ಅಜೇಯ ಯಾತ್ರೆಯೂ ಮುಂದುವರೆದಿದೆ.
ಹೌದು... ಟೆಸ್ಟ್ ಪಂದ್ಯದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆಯಾದ ಬಳಿಕ ಅವರು ಟಾಸ್ ಗೆದ್ದ ಯಾವುದೇ ಪಂದ್ಯಗಳಲ್ಲಿ ಭಾರತ ಸೋತೇ ಇಲ್ಲ. ವಿರಾಟ್ ಕೊಹ್ಲಿ ಈ ವರೆಗೂ ನಾಯಕರಾಗಿ 21 ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು, ಈ ಪೈಕಿ ಮೆಲ್ಬೋರ್ನ್ ಪಂದ್ಯವೂ ಸೇರಿದಂತೆ 18 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಉಳಿದ ಮೂರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ಆ ಮೂಲಕ ಟಾಸ್ ಗೆದ್ದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ ಯಾತ್ರೆ ಮುಂದುವರೆದಿದೆ.