ಕ್ರಿಕೆಟ್

ಭಾರತದ ವಿರುದ್ಧದ ಸೋಲಿಗೆ ಮಾಟ-ಮಂತ್ರ ಕಾರಣ: ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜರ್ ಹೇಳಿಕೆ

Srinivasamurthy VN
ಇಸ್ಲಾಮಾಬಾದ್: ಅಂಡರ್ 19 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಂಡದ ಸೋಲಿಗೆ ಮಾಟಮಂತ್ರ ಕಾರಣ ಎಂದು ಪಾಕಿಸ್ತಾನ ಅಂಡರ್ 19 ಕ್ರಿಕೆಟ್ ತಂಡದ ಮ್ಯಾನೇಜರ್ ನದೀಂ ಖಾನ್ ಹೇಳಿಕೆ ನೀಡಿದ್ದಾರೆ.
ಅಂಡರ್ 19 ವಿಶ್ವಕಪ್ ಟೂರ್ನಿಯ ಬಳಿಕ ಪಾಕಿಸ್ತಾನಕ್ಕೆ ವಾಪಸ್ ಆಗಿರುವ ತಂಡದ ಮ್ಯಾನೇಜರ್ ನದೀಂ ಖಾನ್ ಅಲ್ಲಿನ ಮಾಧ್ಯಮಗಳೊಂದಿಗೆ ತಂಡದ ಸೋಲಿನ ಕುರಿತು ಮಾತನಾಡಿದ್ದಾರೆ. ಈ ವೇಳೆ ತಂಡದ ಸೋಲಿಗೆ  ಮಾಟಮಂತ್ರವೇ ಕಾರಣ ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ. "ಅಂಡರ್-19 ಏಕದಿನ ಕ್ರಿಕೆಟ್​ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋಲಿಗೆ ಯಾವುದೋ ಮ್ಯಾಜಿಕ್​ ಸ್ಪೆಲ್​(ಮಾಟ  ಮಂತ್ರ) ಕಾರಣ" ಎಂದು ತಂಡದ ಮ್ಯಾನೇಜರ್​ ನದೀಮ್​ ಖಾನ್​ ಆರೋಪಿಸಿದ್ದಾರೆ. 
"ಭಾರತದ ವಿರುದ್ಧ ಆಟಗಾರರು ಆಡಿದ್ದನ್ನು ನೋಡಿದರೆ ಯಾರೋ ನಮ್ಮ ವಿರುದ್ಧ ಮಾಟ ಮಂತ್ರ ಮಾಡಿದಂತೆ ಕಾಣಿಸುತ್ತಿತ್ತು ಭಾರತ ನೀಡಿದ ಗುರಿಯ ಸಮೀಪವಾದರೂ ನಾವು ತಲುಪಬಲ್ಲೆವು ಎಂಬ ನಂಬಿಕೆ ಇತ್ತು. ಆದರೆ  ಕೇವಲ 69 ರನ್​ಗಳಿಗೆ ನಮ್ಮ ತಂಡ ಸರ್ವಪತನ ಕಂಡಿದ್ದನ್ನು ನೋಡಿದರೆ ನಮ್ಮ ಮೇಲೆ ಮ್ಯಾಜಿಕ್​ ಸ್ಪೆಲ್​ ನೆಡೆದಿದೆಯೇನೋ ಎಂಬ ಅನುಮಾನ ಮೂಡವಂತಿತ್ತು. ನಮ್ಮ ಆಟಗಾರರಿಗೆ ಮೈದಾನದ ಮೇಲೆ ಏನು ನಡೆಯುತ್ತಿದೆ.  ಪರಿಸ್ಥಿತಿ ಹಾಗೂ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂಬ ಎಂಬ ಅರಿವೇ ಇರಲಿಲ್ಲ ಎಂದು ಹೇಳಿದ್ದಾರೆ.
ನದೀಮ್​ ಖಾನ್​ ಪಾಕಿಸ್ತಾನದ ಮಾಜಿ ಟೆಸ್ಟ್​ ಆಟಗಾರ ಕೂಡ ಆಗಿದ್ದು, ತಂಡದ ಕಳಪೆ ಆಟಕ್ಕೆ ಕಾರಣ ಹುಡುಕಿ ಉತ್ತಮ ಪ್ರದರ್ಶನಕ್ಕೆ ಅನುವು ಮಾಡಿಕೊಡುವ ಬದಲು ಸ್ವತಃ ಅವರೇ ಮಾಟಮಂತ್ರದ ಕುರಿತು ಮಾತನಾಡಿ  ಉದಯೋನ್ಮುಖ ಕ್ರಿಕೆಟಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದಾರೆ ಎಂಬ ಆರೋಪಗಳೂ ಕೂಡ ಕೇಳಿಬರುತ್ತಿವೆ. ಒಟ್ಟಾರೆ ಕ್ರಿಕೆಟ್ ವಲಯದಲ್ಲಿ ನದೀಂ ಖಾನ್ ಅವರ ಹೇಳಿಕೆ ಮಾತ್ರ ನೆಗೆ ಪಾಟಲಿಗೆ ಈಡಾಗಿದೆ.
SCROLL FOR NEXT