ಕ್ರಿಕೆಟ್

ಏಕದಿನ ಕ್ರಿಕೆಟ್: 200 ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳೆ ಜೂಲನ್ ಗೋಸ್ವಾಮಿ

Lingaraj Badiger
ಕಿಂಬರ್ಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆಯುವ ಮೂಲಕ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಇಂದು ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಜೂಲನ್ ಗೋಸ್ವಾಮಿ ಅವರು ಆಫ್ರಿಕದ ಹದಿನೆಂಟರ ಹರೆಯದ ಆಟಗಾರ್ತಿ ಲೌರಾ ವೋಲ್ವಡ್ತ್ ವಿಕೆಟ್ ವಿಕೆಟ್ ಪಡೆಯುವ ಮೂಲಕ 200 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಬಂಗಾಳದ 35 ವರ್ಷದ ವೇಗಿ ಜೂಲನ್ ಗೋಸ್ವಾಮಿ ಅವರು ಮೇ 2017ರಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದ ಆಸ್ಟ್ರೇಲಿಯದ ವೇಗಿ ಕ್ಯಾಥರಿನ್ ಫಿಟ್ಜ್ ಪ್ಯಾಟ್ರಿಕ್ ಅವರ ದಾಖಲೆ ಮುರಿದಿದ್ದರು.
ಒಟ್ಟು 180 ವಿಕೆಟ್ ಗಳನ್ನು ಕಬಳಿಸಿ ಕ್ಯಾಥರಿನ್ ಅಗ್ರಸ್ಥಾನದಲ್ಲಿದ್ದರು. ಕಳೆದ ವರ್ಷ ಜೂಲನ್ ಗೋಸ್ವಾಮಿ ಅವರು 181 ವಿಕೆಟ್ ಗಳನ್ನು ಪಡೆಯುವ ಮೂಲಕ ಕ್ಯಾಥರಿನ್ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ 200 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
SCROLL FOR NEXT