ಬಾಟಾದ ಕ್ರೀಡಾ ಉತ್ಪನ್ನ ಪವರ್ ಗೆ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಸ್ಮೃತಿ ಮಂದಾನ ಅದ್ಭುತ ಆಟ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅವರ ಖ್ಯಾತಿಯೂ ಹೆಚ್ಚಿದ್ದು ಇದರಿಂದಾಗಿ ಬಾಟಾ ತನ್ನ ನೂತನ ಬ್ರಾಂಡ್ ಗೆ ಸ್ಮೃತಿ ಮಂದಾನ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ.
ಬಾಟಾದ ಪವರ್ ಉತ್ಪನ್ನಗಳು ನನ್ನ ಜೀವನ ವಿಧಾನಕ್ಕೆ ಹತ್ತಿರವಾಗಿವೆ. ಬಾಟಾದವರು ಕ್ರೀಡೆಗೆ ನೀಡುವ ಆದ್ಯತೆ ಮೆಚ್ಚುವಂಥಾದ್ದು. ಹೀಗಾಗಿ ಸಂಸ್ಥೆ ಅವರು ನನ್ನನ್ನು ಸಂಪರ್ಕಿಸಿದಾಗ ರಾಯಭಾರಿಯಾಗಲು ಒಪ್ಪಿಕೊಂಡೆ ಎಂದು ಮಂದಾನ ಹೇಳಿದ್ದಾರೆ.
ಟೀಂ ಇಂಡಿಯಾದ ಸ್ಫೋಟಕ ಆಟಗಾರ್ತಿ ಮಂದಾನ ಹೆಚ್ಚು ಖ್ಯಾತಿ ಗಳಿಸಿದ್ದು ಹೀಗಾಗಿ ಅವರನ್ನು ನಮ್ಮ ಉತ್ಪನ್ನದ ರಾಯಭಾರಿಯಾಗಿ ಮಾಡಲು ಮುಂದಾಗಿದ್ದೇವೆ ಎಂದು ಬಾಟಾ ಇಂಡಿಯಾದ ವ್ಯವಸ್ಥಾಪಕ ಸಂದೀಪ್ ಕಟಾರಿಯಾ ಹೇಳಿದ್ದಾರೆ.