ಕ್ರಿಕೆಟ್

ನಾವು ಒತ್ತಡದಲ್ಲಿದ್ದೇವೆ, ಇದು ನಮಗೆ ಮಾಡು ಇಲ್ಲವೆ ಮಡಿ ಪಂದ್ಯ: ಆಫ್ರಿಕಾ ಆಲ್ರೌಂಡರ್

Vishwanath S
ಜೋಹಾನ್ಸ್ ಬರ್ಗ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಆರು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಒತ್ತಡದಲ್ಲಿದ್ದು ನಾಲ್ಕನೇ ಪಂದ್ಯ ನಮಗೆ ಮಾಡು ಇಲ್ಲವೆ ಮಡಿ ಎಂದು ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ಹೇಳಿದ್ದಾರೆ. 
ಪ್ರಚಂದ ಲಯದಲ್ಲಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ಬರೆಯಲು ತುದಿಗಾಲಲ್ಲಿ ನಿಂತಿದೆ. 6 ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಗೆದ್ದು ಬೀಗಿರುವ ಭಾರತಕ್ಕೆ ನಾಲ್ಕನೇ ಪಂದ್ಯ ಹೆಚ್ಚು ಮಹತ್ವದ್ದಾಗಿದ್ದು ಈ ಪಂದ್ಯ ಗೆದ್ದರೆ ಆಫ್ರಿಕಾದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದ ಸಾಧನೆ ಮಾಡುತ್ತದೆ. ಒಂದು ಕಡೆ ಸರಣಿ ಗೆದ್ದು ಭಾರತ ಇತಿಹಾಸ ಬರೆಯಲು ಮುಂದಾಗಿದ್ದರೆ ಅತ್ತ ಆಫ್ರಿಕಾ ತಂಡದಲ್ಲಿ ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಹವಣಿಸುತ್ತಿದೆ. 
ಈ ಮಧ್ಯೆ ನಾಲ್ಕನೇ ಪಂದ್ಯ ನಮಗೆ ಹೆಚ್ಚು ಮಹತ್ವದ್ದಾಗಿದ್ದು ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಹೀಗಾಗಿ ನಾವು ಸ್ವಾಭಾವಿಕವಾಗಿ ಒತ್ತಡದಲ್ಲಿದ್ದೇವೆ. ಈ ಪಂದ್ಯವನ್ನು ಕೈಚೆಲ್ಲಿದರೆ ನಾವು ಸರಣಿಯನ್ನು ಬಿಟ್ಟುಕೊಟ್ಟಂತೆ. ಆದ್ದರಿಂದ ಪಂದ್ಯದ ಪ್ರತಿಯೊಂದು ಬಾಲ್ ಗೂ ಹೋರಾಡುತ್ತೇವೆ. ಅಲ್ಲಿ ಪ್ರತಿಯೊಂದು ರನ್ ಔಟ್ ಆಗುತ್ತದೆ. ಆದ್ದರಿಂದ ನಾವು ಸಾಕಷ್ಟು ಒತ್ತಡದಲ್ಲಿದ್ದೇವೆ. ಒತ್ತಡವಿಲ್ಲದಿದ್ದರೇ ಕ್ರಿಕೆಟ್ ನಲ್ಲಿ ಏನಿದೆ? ಪಂದ್ಯ ನೀರಸವಾಗುತ್ತದೆ ಎಂದು ಮೋರಿಸ್ ಹೇಳಿದ್ದಾರೆ.
ಭಾರತ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ನಮ್ಮ ತಂಡ ಕಠಿಣ ಹೋರಾಟ ಮಾಡುತ್ತೇವೆ. ನಾವು ಈ ಆಟವನ್ನು ನಾವು ನಿಜವಾಗಿಯೂ ಆಡಬಹುದೆಂದು ಅದಕ್ಕೆ ನಾವು ಸಮರ್ಥರೆಂದು ತೋರಿಸುತ್ತೇವೆ. ಇನ್ನು ಗಾಯಗೊಂಡಿದ್ದ ಎಬಿಡಿ ವಿಲಿಯರ್ಸ್ ಸಹ ತಂಡಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ ಎಂದರು. 
SCROLL FOR NEXT