ಕ್ರಿಕೆಟ್

ಆಫ್ರಿಕಾ ವಿರುದ್ಧದ 4ನೇ ಪಂದ್ಯ ಸೋಲಿಗೆ ಧವನ್ ಕೊಟ್ಟ ಕಾರಣ ಏನು ಗೊತ್ತಾ!

Vishwanath S
ಜೋಹಾನ್ಸ್ ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಅಜೇಯ ಯಾತ್ರೆ ಮುಂದುವರೆಸಿದ್ದ ಟೀಂ ಇಂಡಿಯಾ ನಾಲ್ಕನೇ ಪಂದ್ಯದಲ್ಲಿ ಸೋಲು ಕಂಡಿದ್ದು ಇದಕ್ಕೆ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಕಾರಣಗಳನ್ನು ಕೊಟ್ಟಿದ್ದಾರೆ. 
ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್ 6 ರನ್ ಗಳಿಸಿದ್ದಾಗ ಕೈ ಚೆಲ್ಲಿದ ಕ್ಯಾಚ್ ಹಾಗೂ 7 ರನ್ ಗಳಿಸಿದ ವೇಳೆ ಹಾಕಿದ ನೋ ಬಾಲ್ ನಮಗೆ ಬಲು ದುಬಾರಿಯಾಗಿ ಪರಿಣಮಿಸಿತು. ಇನ್ನು ಮಳೆ ಕೂಡ ಆಫ್ರಿಕಾ ಗೆಲುವಿಗೆ ಸಹಕಾರಿಯಾಯಿತು ಎಂದು ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ. 
ಇನ್ನು ಶಿಖರ್ ಧವನ್ ತಮ್ಮ ನೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನೆಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಧವನ್ 105 ಎಸೆತಗಳಲ್ಲಿ 2 ಸಿಕ್ಸರ್, 10 ಬೌಂಡರಿ ಸೇರಿದಂತೆ 109 ರನ್ ಗಳಿಸಿದ್ದಾರೆ. 
SCROLL FOR NEXT