ಇಮ್ರಾನ್ ತಾಹಿರ್ 
ಕ್ರಿಕೆಟ್

ಭಾರತ ತಂಡದ ಅಭಿಮಾನಿಯಿಂದ ಜನಾಂಗೀಯ ನಿಂದನೆ: ಇಮ್ರಾನ್ ತಾಹಿರ್ ಆರೋಪ

ಭಾರತ-ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಅಭಿಮಾನಿಯೊಬ್ಬರಿಂದ ಜನಾಂಗೀಯ ನಿಂದನೆಗೆ

ಭಾರತ-ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು,  ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಅಭಿಮಾನಿಯೊಬ್ಬರಿಂದ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಾಗಿ ದಕ್ಷಿಣ ಆಫ್ರಿಕಾದ ಆಟಗಾರ ಇಮ್ರಾನ್ ತಾಹಿರ್ ಆರೋಪಿಸಿದ್ದಾರೆ.
    
ಫೆ.10 ರಂದು ನಡೆದ ಪಂದ್ಯದಲ್ಲಿ ಇಮ್ರಾನ್ ತಾಹಿರ್ ಭಾಗಿಯಾಗಿರಲಿಲ್ಲ. ಈ ವೇಳೆ ತಂಡದ 12 ನೇ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಇಮ್ರಾನ್ ತಾಹಿರ್ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್  ಮೊಹಮ್ಮದ್ ಮೂಸಜೀ ಹೇಳಿದ್ದಾರೆ.

ಇಮ್ರಾನ್ ಹೇಳಿದ ಪ್ರಕಾರ ಜನಾಂಗೀಯ ನಿಂದನೆ  ಮಾಡಿದವರು ಭಾರತೀಯ ಕ್ರಿಕೆಟ್ ತಂಡದ  ಅಭಿಮಾನಿ ಎಂದು ತಿಳಿದುಬಂದಿದೆ. ಎಂದು ಮೂಸಜೀ ಹೇಳಿದ್ದಾರೆ. ಕ್ರೀಡಾಂಗಣ ಹಾಗು ಆಟಗಾರರ ಡ್ರೆಸ್ಸಿಂಗ್ ರೂಮ್ ನಡುವೆ ಓಡಾಡುತ್ತಿದ್ದಾಗ   ಈ ಘಟನೆ  ನಡೆದಿದ್ದು, ಇಬ್ಬರ ನಡುವೆಯೂ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್‌ ಹೊಡೆದು ಟೆಹ್ರಾನ್ ಪ್ರತೀಕಾರ

Hormuz ತೆರೆಯದಿದ್ದರೂ ಪರವಾಗಿಲ್ಲ, ಯುದ್ಧ ಕೊನೆಯಾಗಬೇಕು..: ಇರಾನ್ ಎದುರು ಮಂಡಿಯೂರಿದ್ರಾ ಅಮೆರಿಕ ಅಧ್ಯಕ್ಷ Donald Trump?

ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದ 'ಅನ್ ಫಾಲೋ' ಪ್ರಹಸನ: ಮತ್ತೆ ಸುದ್ದಿಗೆ ಗ್ರಾಸವಾದ Rishab Shetty

IPL 2026: ದಶಕಗಳ ಕಾಲ ಆಟ.. CSK ಅಭಿಮಾನಿಗಳ ಕೂಗಾಟ.. ಮೈದಾನದಲ್ಲೇ ಭಾವುಕರಾದ Ravindra Jadeja, ವಿಡಿಯೋ ವೈರಲ್

ಇರಾನ್, ಹೆಜ್ಬೊಲಾ ಕ್ಷಿಪಣಿ ದಾಳಿ: ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಇಸ್ರೇಲಿ ಸೈನಿಕರ ಹತ್ಯೆ- IDF

SCROLL FOR NEXT