ನವದೆಹಲಿ: ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿದಿರುವ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ತಮ್ಮ ನಿವೃತ್ತಿ ಕುರಿತು ಮಾತನಾಡಿದ್ದು, ಭಾರತಕ್ಕಾಗಿ ಆಡುವುದೇ ಹೆಮ್ಮೆಯ ಸಂಗತಿ, ವಿಷಾದದೊಂದಿಗೆ ವಿದಾಯ ಹೇಳುವುದು ನನಗಿಷ್ಟವಿಲ್ಲ ಎಂದು ಹೇಳಿದ್ದಾರೆ.
ಆಂಗ್ಲ ಕ್ರೀಡಾವಾಹಿನಿಯೊಂದಿಗೆ ಮಾತನಾಡಿರುವ ಯುವಿ ಇದೇ ಮೊದಲ ಬಾರಿಗೆ ತಮ್ಮ ನಿವೃತ್ತಿ ಕುರಿತು ಮಾತನಾಡಿದ್ದು, ಚಿಕ್ಕ ವಯಸ್ಸಿನಿಂದಲೂ ನಾನು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತೇನೆ, ನನ್ನಿಷ್ಟದ ಕ್ರೀಡೆಗೆ ವಿಷಾಧದ ಮೂಲಕ ವಿದಾಯ ಹೇಳುವುದು ನನಗಿಷ್ಟವಿಲ್ಲ. ಹೀಗಾಗಿ ಮತ್ತೊಂದಷ್ಟು ವರ್ಷಗಳ ಕಾಲ ತಂಡಕ್ಕಾಗಿ ಆಡುವುದು ನನ್ನ ಗುರಿಯಾಗಿದೆ. ನನ್ನ ಮನಸ್ಸಿಗೆ ಸಾಕು ಎನಿಸಿದಾಗ ನಾನೇ ಖುದ್ಧು ವಿದಾಯ ಘೋಷಿಸುತ್ತೇನೆ. ಪ್ರಸ್ತುತ ನನ್ನ ಮನಸ್ಸಿನಲ್ಲಿ ವಿದಾಯದ ಮಾತೇ ಇಲ್ಲ. ಈಗೇನಿದ್ದರೂ ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಮರಳಬೇಕು ಎಂದಿದ್ದೇನೆ ಎಂದು ಹೇಳಿದ್ದಾರೆ.
ನಾನು ಈಗಲೂ ಅದೇ ಹುಮ್ಮಸ್ಸಿನಿಂದಲೇ ಕ್ರಿಕೆಟ್ ಆಡುತ್ತಿದ್ದು, ಕ್ರಿಕೆಟ್ ಅನ್ನು ಎಂಜಾಯ್ ಮಾಡುತ್ತಿದ್ದೇನೆ. ಕೇವಲ ಭಾರತ ತಂಡದಲ್ಲಿಯಷ್ಟೇ ನಾನು ಐಪಿಎಲ್ ಮತ್ತು ದೇಶೀಯ ತಂಡಗಳೊಂದಿಗೂ ಆಡುತ್ತಿದ್ದೇನೆ. ಖಂಡಿತಾ ಯಾವುದೇ ಆಟಗಾರನಿಗೂ ಭಾರತ ದೇಶಕ್ಕಾಗಿ ಆಡುವುದು ಹೆಮ್ಮೆಯ ಸಂಗತಿಯಾಗಿರುತ್ತದೆ. ನನಗೂ ಕೂಡ, ಶೀಘ್ರ ನಾನು ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಯುವಿ ಹೇಳಿದ್ದಾರೆ.
ವಿದಾಯ ಬಳಿಕ ವೀಕ್ಷಕ ವಿವರಣೆಗಾರನಾಗುವುದಿಲ್ಲ
ಇದೇ ವೇಳೆ ತಮ್ಮ ವಿದಾಯದ ಬಳಿಕ ನಾನಂತೂ ವೀಕ್ಷಕ ವಿವರಣೆಗಾರನಾಗುವುದಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ವಿದಾಯದ ಬಳಿಕ ಕ್ರಿಕೆಟ್ ಆಕಾಡೆಮಿ ಸ್ಥಾಪಿಸುವ ಉದ್ದೇಶದ ಕುರಿತು ಯುವಿ ಮಾಹಿತಿ ನೀಡಿದ್ದಾರೆ.
ಈ ಹಿಂದೆ ನಡೆದ ವಿಜಾಯ್ ಹಜಾರೆ ಟಿ20 ಪಂದ್ಯದಲ್ಲಿ ಯುವಿ ಅಸ್ಸಾಮ್ ವಿರುದ್ಧ ಸ್ಫೋಟಕ ಅರ್ಧಶತಕ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics