ಟೀಂ ಇಂಡಿಯಾ 
ಕ್ರಿಕೆಟ್

ಪೋರ್ಟ್ ಎಲಿಜಬೆತ್ ಪಿಚ್‌ನಲ್ಲಿನ ಈ ಹಿಂದಿನ ಸೋಲಿನ ಕಹಿಯನ್ನು ಸುಳ್ಳಾಗಿಸಿದ ಕೊಹ್ಲಿ ಪಡೆ!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯ ಐದನೇ ಪಂದ್ಯ ಪೋರ್ಟ್ ಎಲಿಜಬೆತ್ ನಲ್ಲಿ ನಡೆದಿದ್ದು ಬರೀ ಸೋಲಿನ ಕಹಿಯನ್ನು...

ಫೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯ ಐದನೇ ಪಂದ್ಯ ಪೋರ್ಟ್ ಎಲಿಜಬೆತ್ ನಲ್ಲಿ ನಡೆದಿದ್ದು ಬರೀ ಸೋಲಿನ ಕಹಿಯನ್ನು ಉಂಡಿದ್ದ ಮೈದಾನದಲ್ಲಿ ಕೊಹ್ಲಿ ಪಡೆ ಗೆಲುವಿನ ಸಿಹಿ ಉಂಡಿದೆ. 
ಪೋರ್ಟ್ ಎಲಿಜಬೆತ್ ಮೈದಾನದಲ್ಲಿ ಇಲ್ಲಿಯವರೆಗೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿಲ್ಲ. ಈ ಹಿಂದೆ ಟೀಂ ಇಂಡಿಯಾ ಪೋರ್ಟ್ ಎಲಿಜಬೆತ್ ಕ್ರೀಡಾಂಗಣದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದ ಅವುಗಳಲ್ಲಿ ಯಾವ ಪಂದ್ಯವನ್ನು ಗೆದ್ದಿರಲಿಲ್ಲ. ಆದರೆ ಐದನೇ ಪಂದ್ಯದಲ್ಲಿ ಕೊಹ್ಲಿ ಪಡೆ ಭರ್ಜರಿ 73 ರನ್ ಗಳಿಂದ ಗೆದ್ದು ಬೀಗಿದೆ. 
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಸರಣಿ ಜಯದೊಂದಿಗೆ ಹೊಸ ದಾಖಲೆಯನ್ನು ವಿರಾಟ್ ಕೊಹ್ಲಿ ಪಡೆ ನಿರ್ಮಿಸಿದೆ. ಈ ಹಿಂದೆ ಈ ಮೈದಾನದಲ್ಲಿ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಎಂಎಸ್ ಧೋನಿ ಭಾರತ ತಂಡವನ್ನು ಮುನ್ನಡೆಸಿದ್ದರು.
ದುರುದೃಷ್ಟಕರ ಸಂಗತಿಯೆಂದರೆ ಈ ನಾಲ್ಕು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಸೋಲು ಕಂಡಿತ್ತು. ಇನ್ನು ತಂಡ ಒಮ್ಮೆಯೂ 200 ರನ್ ಗಳ ಗಡಿ ದಾಟಿಲ್ಲ. ಅಜರುದ್ದೀನ್ ನೇತೃತ್ವದಲ್ಲಿ ಟೀಂ ಇಂಡಿಯಾ 147 ರನ್ ಬಾರಿಸಿದ್ದೆ ಗರಿಷ್ಠ ರನ್ ಆಗಿತ್ತು. ಆದರೆ ಐದನೇ ಪಂದ್ಯದಲ್ಲಿ ಕೊಹ್ಲಿ ಪಡೆ 274 ರನ್ ಗಳನ್ನು ಬಾರಿಸಿದ್ದು ಅಲ್ಲದೆ 73 ರನ್ ಗಳಿಂದ ಜಯ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ