ಕ್ರೀಡಾಸ್ಫೂರ್ತಿ ಮರೆತ ದೆಹಲಿ ಆಟಗಾರರು 
ಕ್ರಿಕೆಟ್

ವಿದರ್ಭ ಬ್ಯಾಟ್ಸ್ ಮನ್ ಗೆ ಚೆಂಡು ತಾಗಿ ಒದ್ದಾಡುತ್ತಿದ್ದರು ಸಹಾಯಕ್ಕೆ ಬಾರದ ದೆಹಲಿ ಆಟಗಾರರು; ಆಕ್ರೋಶ

ವಿದರ್ಭ ತಂಡದ ಆಟಗಾರನೊಬ್ಬ ಚೆಂಡು ತಗುಲಿ ಒದ್ದಾಡುತ್ತಿದ್ದರು ಎದುರಾಳಿ ದೆಹಲಿ ತಂಡದ ಆಟಗಾರರು ಸಹಾಯಕ್ಕೆ ಬಾರದೆ ಇದ್ದಿದ್ದನ್ನು ನೆಟಿಜನ್ಸ್ ಗಳು ಪ್ರಶ್ನಿಸಿದ್ದಾರೆ...

ಇಂದೋರ್: ವಿದರ್ಭ ತಂಡದ ಆಟಗಾರನೊಬ್ಬ ಚೆಂಡು ತಗುಲಿ ಒದ್ದಾಡುತ್ತಿದ್ದರು ಎದುರಾಳಿ ದೆಹಲಿ ತಂಡದ ಆಟಗಾರರು ಸಹಾಯಕ್ಕೆ ಬಾರದೆ ಇದ್ದಿದ್ದನ್ನು ನೆಟಿಜನ್ಸ್ ಗಳು ಪ್ರಶ್ನಿಸಿದ್ದಾರೆ. 
ಪ್ರಸಕ್ತ ಸಾಲಿನ ರಣಜಿ ಫೈನಲ್ ಪಂದ್ಯ ಇಂದೋರ್ ಕ್ರೀಡಾಂಗಣದಲ್ಲಿ ನಡೆದಿದ್ದು ದೆಹಲಿ ವಿರುದ್ಧ ವಿದರ್ಭ ತಂಡ ಗೆದ್ದು ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಮಧ್ಯೆ ಪಂದ್ಯದಲ್ಲಿ ವಿದರ್ಭ ತಂಡದ ಬ್ಯಾಟ್ಸ್ ಮ್ಯಾನ್ ಗೆ ಬೌಲರ್ ಎಸೆದ ಚೆಂಡು ತಗುಲಿ ಕೆಳಗೆ ಬಿದ್ದು ನೋವಿನಿಂದ ನರಳುತ್ತಿದ್ದಾಗ ಮೈದಾನದಲ್ಲಿದ್ದ ದೆಹಲಿ ಆಟಗಾರರು ಆತನ ಹತ್ತಿರ ಸುಳಿಯದೆ ತಮ್ಮ ಪಾಡಿಗೆ ಸುಮ್ಮನಾಗಿದ್ದು ದೆಹಲಿ ತಂಡದ ಆಟಗಾರರ ಕ್ರೀಡಾ ಸ್ಪೂರ್ತಿ ಮರೆತು ನಡೆದುಕೊಂಡಿದ್ದಾರೆ ಎಂದು ನೆಟಿಜನ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ವಿದರ್ಭ ತಂಡದ ಬ್ಯಾಟ್ಸ್ ಮನ್ ನೋವಿನಿಂದ ನರಳುತ್ತಿದ್ದರು ಪಂದ್ಯದ ಅಂಪೈರ್ ಗಳು ಸಹ ಆತನ ಸಹಾಯಕ್ಕೆ ತೆರಳಲಿಲ್ಲ. ಅಲ್ಲದೆ ವಿದರ್ಭ ತಂಡದ ಮತ್ತೋರ್ವ ಬ್ಯಾಟ್ಸ್ ಮನ್ ಸಹ ಡ್ರೆಸ್ಸಿಂಗ್ ರೂಂ ಕಡೆಗೆ ಸನ್ನೆ ಮಾಡಿ ವೈದ್ಯಕೀಯ ನೆರವು ಯಾಚಿಸಿದರೇ ಹೊರತು ಬ್ಯಾಟ್ಸ್ ಮನ್ ಹತ್ತಿರಕ್ಕೂ ಹೋಗಲಿಲ್ಲ. 
ಇದಕ್ಕೆ ಕ್ರೀಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯವರಿಂದ ಕ್ರೀಡಾ ಸ್ಫೂರ್ತಿಯನ್ನು ಕಲಿಯಿರಿ ಎಂದು ದೆಹಲಿ ಆಟಗಾರರಿಗೆ ಸಲಹೆ ನೀಡಿದ್ದಾರೆ. 
ದುರ್ದೈವದ ಸಂಗತಿಯೆಂದರೆ ದೆಹಲಿ ತಂಡದಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ ಗೌತಮ್ ಗಂಭೀರ್ ಹಾಗೂ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಸಹ ಇದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT