ಕೇಪ್ ಟೌನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ.
ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ಇದಕ್ಕಾಗಿ ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರು ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರಿಗೆ ಸ್ನಾನ ಮಾಡಲು ಕೇವಲ 2 ನಿಮಿಷ ಮಾತ್ರ ನೀಡಲಾಗಿದೆಯಂತೆ.
ಇದಕ್ಕೆ ಕಾರಣ ಆಫ್ರಿಕಾದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದು. ಪ್ರಮುಖವಾಗಿ ಕೇಪ್ ಟೌನ್ ನಲ್ಲಿ ಜನರು ನೀರಿಗೆ ಪರದಾಡುತ್ತಿದ್ದು ಇದಕ್ಕಾಗಿ ಆಡಳಿತ ಜನರಿಗೆ ಎರಡು ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡದಂತೆ ಸೂಚನೆ ನೀಡಿದೆ.
ಹೀಗಾಗಿ ಕೇಪ್ ಟೌನ್ ಜನರಿಗೆ ಅನ್ವಯವಾಗುವ ನಿಯಮ ಭಾರತ ತಂಡ ಆಟಗಾರರಿಗೆ ಅನ್ವಯಿಸಿದೆ. ಈ ನಿಯಮದಂತೆ ಎರಡು ನಿಮಿಷ ಸ್ನಾನ ಮಾಡಿ ಹೊರ ಬರಬೇಕಾಗಿದೆ ಎಂದು ಟೀಂ ಇಂಡಿಯಾ ಆಟಗಾರರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics