ಟೀಂ ಇಂಡಿಯಾ 
ಕ್ರಿಕೆಟ್

ವಿದೇಶಿ ನೆಲದಲ್ಲಿ ಕೊಹ್ಲಿ ಪಡೆಗೇ ಜಯ: 2011ರ ವಿಶ್ವಕಪ್‌ನಲ್ಲಿ ಭಾರತ ಗೆಲ್ಲುವುದರ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ!

2011ರ ವಿಶ್ವಕಪ್ ವಿಜೇತ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಅವರು 2019ರ ವಿಶ್ವಕಪ್ ಕಪ್ ಭಾರತ ತಂಡದಲ್ಲೂ ಆಡಲಿದ್ದಾರೆ ಎಂದು ಕ್ರಿಕೆಟ್...

ನವದೆಹಲಿ: 2011ರ ವಿಶ್ವಕಪ್ ವಿಜೇತ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಅವರು 2019ರ ವಿಶ್ವಕಪ್ ಕಪ್ ಭಾರತ ತಂಡದಲ್ಲೂ ಆಡಲಿದ್ದಾರೆ ಎಂದು ಕ್ರಿಕೆಟ್ ಜ್ಯೋತಿಷಿ ನರೇಂದ್ರ ಬುಂದೆ ಹೇಳಿದ್ದು ಇದೀಗ ವಿದೇಶಿ ನೆಲದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ ಎಂದರು.
ನಾಗಪುರದ ಜ್ಯೋತಿಷಿ ನರೇಂದ್ರ ಬುಂದೆ ಅವರು ಈ ಹಿಂದೆ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮತ್ತೆ ತಂಡದಲ್ಲಿ ಆಡುತ್ತಾರೆ, ಸೌರವ್ ಗಂಗೂಲಿ ಸಹ ಕಮ್ ಬ್ಯಾಕ್ ಮಾಡುತ್ತಾರೆ. ಇನ್ನು 2011ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. 
ವಿದೇಶಿ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಇತಿಹಾಸ ಬರೆಯಲಿದೆ. ಜತೆಗೆ ಹಲವು ತಿಂಗಳಿನಿಂದ ಕಳಪೆ ಪ್ರದರ್ಶನ ನೀಡುತ್ತಿದ್ದು ಅವರ ಪ್ರದರ್ಶನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಪ್ರಶ್ನೆಗಳು ಎದ್ದಿದ್ದವು ಇದೀಗ ಇಂತಹ ಪ್ರಶ್ನೆಗೆ ಉತ್ತರಿಸಿರುವ ನರೇಂದ್ರ ಬುಂದೆ ಎಂಎಸ್ ಧೋನಿ ಸಹ 2019ರ ಭಾರತ ತಂಡದಲ್ಲಿ ಆಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. 
ಸಚಿನ್ ತೆಂಡೂಲ್ಕರ್ ಅವರು ಮಾಂತ್ರಿಕತೆ ಸೃಷ್ಟಿಸಿದಂತೆ ವಿರಾಟ್ ಕೊಹ್ಲಿ ಸಹ ಇತಿಹಾಸ ನಿರ್ಮಿಸಲಿದ್ದಾರೆ. ವಾಸ್ತವವಾಗಿ, ವಿರಾಟ್ ಕೊಹ್ಲಿ ಅವರ ಗ್ರಹಗತಿಗಳು ಪ್ರಬಲವಾಗಿವೆ ಮತ್ತು ವಿದೇಶಿ ನೆಲದಲ್ಲಿ ಇವು ಚನ್ನಾಗಿ ಕೆಲಸ ಮಾಡುತ್ತವೆ ಎಂದು ನರೇಂದ್ರ ಬುಂದೆ ಭವಿಷ್ಯ ನುಡಿದಿದ್ದಾರೆ. 
ಪ್ರಸ್ತುತ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ಬೇಸಿಗೆಯಲ್ಲಿ ಆಸ್ಟ್ರೇಲಿಯಾ ಪ್ರವಾಸದ ನಂತರ ಇಂಗ್ಲೆಂಡ್ ಗೆ ಪ್ರಯಾಣಿಸಲಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಟೀಂ ಇಂಡಿಯಾ ವಿದೇಶಿ ನೆಲಗಳಲ್ಲಿ ಅಗ್ನಿ ಪರೀಕ್ಷೆಗೆ ಸಿದ್ಧವಾಗಿದೆ. 
ಈ ಹಿಂದೆ ಎದುರಾಳಿ ತಂಡ ಭಾರತವನ್ನು ವೈಟ್ ವಾಶ್ ಮಾಡಿದ್ದಕ್ಕೆ ಇದೀಗ ನಾವು ಹೆದರಬೇಕಿಲ್ಲ. ವಿರಾಟ್ ಕೊಹ್ಲಿಯ ನಕ್ಷತ್ರ ಮತ್ತು ಗ್ರಹಗಳ ಸ್ಥಾನಗಳ ಪ್ರಕಾರ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಂತಾದ ಸ್ಥಳಗಳಲ್ಲಿ ಧನಾತ್ಮಕ ಫಲಿತಾಂಶಗಳ ಸಾಧ್ಯತೆಗಳಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಟಿಕೆಟ್‌: ಡಿಕೆ ಶಿವಕುಮಾರ್ ಘೋಷಣೆ

ಅನಂತ್‌ನಾಗ್‌: ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆ!

ಬೆಂಗಳೂರು: CJI ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಎಫ್ಐಆರ್ ದಾಖಲು

ಸ್ವದೇಶಿ ಮಂತ್ರ: Gmailನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್‌ಗೆ ಠಕ್ಕರ್

ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)

SCROLL FOR NEXT